ಹಿಮಕರಡಿ (ಪೆಬ್ಬೆ)
ಒಂದು ದಿನ ಹಿಮಕರಡಿ ಮರಿಯೊಂದು ತನ್ನ ಮನೆಯ ಮುಂದೆ ಸಪ್ಪೆ ಮುಖ ಮಾಡಿಕೊಂಡು ಕುಳಿತಿತ್ತು . ತನ್ನ ಅಣ್ಣ ಅಕ್ಕಂದಿರು ಎಲ್ಲ ಶಾಲೆಗೆ ತೆರಳಿದ್ದರು. ಅಮ್ಮ ಮನೆಯಲ್ಲೇ ಇದ್ದರು , ಅಡುಗೆ ಮನೆಯಲ್ಲಿ ಅವಳಿಗೆ ಉಸಿರಾಡಲು ಪುರುಸೊತ್ತು ಇಲ್ಲದಷ್ಟು ಕೆಲಸ. ಆಟವಾಡಲು ಯಾರಾದರೂ ಸಿಗಬಹುದೇ ಎಂದು ದಾರಿ ನೋಡುತ್ತಾ ಕುಳಿತಿದ್ದ ಪೆಬ್ಬೆ. ಅಷ್ಟರಲ್ಲಿ ಅವನ ಅಮ್ಮ ಕರೆದದ್ದು ಕೇಳಿ , ಆಟವಾಡಲು ಕರೆಯುತ್ತಿದಾಳೆ ಎಂದು ಖುಷಿಯಲ್ಲಿ ಒಳಗೆ ಓಡಿತು .
ಸಂಜೆ ತಿಂಡಿ ಗೆ ಪಾಯಸ ಮಾಡುವಾದಾಗಿ ಯೋಚಿಸ್ಸಿದ್ದ ತಾಯಿ , ಮನೆಯಲ್ಲಿ ಸಕ್ಕರೆ ಖಾಲಿ ಯಾಗಿರಿವುದನ್ನು ನೋಡಿ , ಅದನ್ನು ತರಲು ಪೆಬ್ಬೆಯನ್ನು ಕರೆದಿದ್ದಳು . "ಪೆಬ್ಬೆ ಅಂಗಡಿ ಗೆ ಹೋಗಿ ಕೆಜಿ ಸಕ್ಕರೆ ತಾ, ನಿನ್ನ ಅಣ್ಣ ಅಕ್ಕ ಶಾಲೆ ಇಂದ ಬರುವು ವೇಳೆಗೆ ಪಾಯಸ ಮಾಡುವೆ , ಎಲ್ಲರು ತಿನ್ನುವ" ಎಂದು ಅದರ ಕೈಗೆ ಚೀಲ ಮತ್ತು ಹಣವನ್ನು ನೀಡಿದಳು . ಆಟವಾಡಲು ಕರೆಯುತ್ತಿದಾಳೆ ಎಂದು ನೆನೆಸಿದ ಪೆಬ್ಬೆಗೆ ತುಸು ನಿರಾಸೆ ಯಾದರು , ಅಂಗಡಿಗೆ ಹೋಗುವ ಕೆಲಸ ಮನೆಯ ಮುಂದೆ ದಾರಿ ಕಾಯುವುದಕ್ಕಿಂತ ಲೇಸು ಎನ್ನಿಸಿ , ಚೀಲ ಹಿಡಿದು ಅಂಗಡಿಯ ಕಡೆ ಹೊರಟಿತು .
ಹಿಮದಿಂದ ಆವರಿಸಿದ ಬೆಟ್ಟ ಗುಡ್ಡಗಳ ಹತ್ತಿ ಇಳಿಯುತ್ತ ಸಾಗಿದ್ದ ಪೆಬ್ಬೆ ಇದ್ದಕ್ಕಿದ್ದ ಹಾಗೆ ಏನೆನ್ನೋ ನೆನಸಿಕೊಂಡು ಹಾಗೆ ಹಿಂದೆ ತಿರುಗಿ ಅಲ್ಲೇ ಇದ್ದ ಹಿಮ ಸರೋವರವನ್ನು ನೋಡಿ ,ಅದರಲ್ಲಿ ಇರುವು ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ತಿನ್ನುವ , ನೀರಲ್ಲಿ ಆಟವಾಡುವ ಆಸೆಯಿಂದ ಕಿರುನಗೆ ಬೀರುತ್ತಾ ಅದರ ಕಡೆಗೆ ಹೆಜ್ಜೆ ಹಾಕಿತು . ಇನ್ನು ಸಣ್ಣವನಾಗಿದ್ದ ಪೆಬ್ಬೆಗೆ ಗೆ ಮೀನು ಹಿಡಿಯುವುದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ . ಅಲ್ಲದೆ ಸರೋವರದಲ್ಲಿ ಇರಬಹುದಾದ ದೊಡ್ಡ ಮೀನುಗಳಿಂದ ಪೆಬ್ಬೆ ಗೆ ಅಪಾಯವಾಗಬಹುದು ಎಂದು ಅದರ ಅಪ್ಪ ಅಮ್ಮ ಅದಕ್ಕೆ ಸರೋವರದಲ್ಲಿ ಮೀನು ಹಿಡಿಯಲು ಬಿಟ್ಟಿರಲಿಲ್ಲ. ಆದರೆ ಈಗ ಯಾರು ತಡೆಯವರು ಇಲ್ಲದ ಕಾರಣ , ಪೆಬ್ಬೆ ಸರೋವರದ ಕಡೆಗೆ ಹೋಗುವು ಮೀನು ಹಿಡಿಯುವ ಧೈರ್ಯ ಮಾಡಿದ್ದ
ತನ್ನ ಮನಸಿಗೆ ತೃಪ್ತಿ ಆಗುವಷ್ಟು ಸಮಯ ಪೆಬ್ಬೆ ನೀರಿನಲ್ಲಿ ಆಟವಾಡಿತು . ಕೊರೆಯುವ ಹಿಮ ಸರೋವರದಲ್ಲಿ ಮಿಂದೆದ್ದು ಖುಷಿ ಪಟ್ಟಿತ್ತು . ನೀರಿನ ಆಳದಲ್ಲಿ ಈಜಿ ಕಂಡ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಗುಳುಂ ಎನಿಸಿತು . ತನ್ನ ಸಾಮರ್ಥ್ಯಕ್ಕೆ ತಾನೇ ಗರ್ವ ಪಡುತಾ, ಅಪ್ಪ ಅಮ್ಮ ಗೆ ಬುದ್ದಿ ಇಲ್ಲ , ನಾನು ಒಳ್ಳೆಯ ಬೇಟೆಗಾರ, ಈಜುಗಾರ, ಇಂದು ಮನೆಗೆ ಹೋದ ಮೇಲೆ ಎಲ್ಲರಿಗು ತನ್ನ ಆಟಗಳ ವರ್ಣನೆ ಮಾಡುವೆ ಎಂದು ಯೋಚಿಸಿಕೊಂಡು ನೀರಿನಲ್ಲಿ ಮುಳುಗೇಳುತ್ತಿತ್ತು . ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಪೆಬ್ಬೆ , ದೊಡ್ಡ ಮೀನೊಂದು ತನ್ನ ಬಳಿ ಬರುವುದು ಕಾಣಲೇ ಇಲ್ಲ . ಇನ್ನೇನು ಆ ದೊಡ್ಡ ಮೀನು ಇದರ ಕಾಲಿಗೆ ಬಾಯಿ ಹಾಕುವಷ್ಟರಲ್ಲಿ , ಪೆಬ್ಬೆ ಎಚ್ಚೆತ್ತು ಮೇಲಕ್ಕೆ ಈಜಿತು . ಆದರೆ ಬಿಡದ ದೊಡ್ಡ ಮೀನು ಇದನ್ನು ಹಿಂಬಾಲಿಸಿ ತಿನಲ್ಲೂ ಯತ್ನಿಸ್ತು. ಆದ್ರೆ ಪೆಬ್ಬೆ ಅದೃಷ್ಟವಶಾತ್ ಹೇಗೋ ತಪ್ಪಿಸಿಕೊಂಡು ಜೀವಕ್ಕೆ ಜೀವ ಬಿಡುತ್ತ ಸರೋವರದಿಂದ ಮೇಲೆ ಓಡಿತು .
ಅಪ್ಪ ಅಮ್ಮ ನ ಮಾತನ್ನು ಕೇಳದೆ ವ್ಯರ್ಥ ಸಾಹಸಕ್ಕೆ ಹೊರಟಿದ್ದು ದೊಡ್ಡ ತಪ್ಪೆಂದು ಅರಿವಾಗಿ , ಇದು ಯಾವುದನ್ನು ಮನೆಯಲ್ಲಿ ಯಾರಿಗೂ ಹೇಳ್ಬಾರದು ಎಂದು ನಿರ್ಧರಿಸಿ ಅದೇ ಭಯದಲ್ಲಿ ಹೇಗೋ ಅಂಗಡಿಗೆ ತೆರಳಿ , ಸಕ್ಕರೆ ಖರೀದಿಸಿ , ಮನೆಗೆ ಸಾಗಿ ಅಮ್ಮನಿಗೆ ನೀಡಿತು . ಸಂಜೆ ಪಾಯಸ ತಿಂದು ಇನ್ನೇನು ಮಲುಗುವ ಸಮಯದಲ್ಲಿ , ಬೆಳ್ಳಿಗೆ ನಡೆದ ಎಲ್ಲ ಸಂಗತಿಗಳನ್ನು ಪೆಬ್ಬೆ ಅಮ್ಮನಲ್ಲಿ ಹೇಳಿತು , ಬೈಯ್ಯಬಹುದೆಂದು ನೆನಿಸಿದ್ದ ಪೆಬ್ಬೆಯ ಸಾಹಸಕ್ಕೆ ಖುಷಿ ಪಟ್ಟ ಅಮ್ಮ ಅದನ್ನು ತೋರ್ಪಡಿಸದೆ , ಮುಂದಿನ ಬಾರಿ ಒಬ್ಬನೇ ಸರೋವರದಲ್ಲಿ ಇಳಿಯಬಾರದೆಂದು ಆಣೆ ಮಾಡಿಸಿಕೊಂಡಳು .ಆಣೆ ಮಾಡಿದ ಪೆಬ್ಬೆ ಅಮ್ಮನ ಬಳಿ ಬೆಚ್ಚಗೆ ಮಲಗಿದ.

1xbet korean | Live in-play betting app | Sports betting
ಪ್ರತ್ಯುತ್ತರಅಳಿಸಿThe 1xbet korean 1xbet platform is also known as 1xbet.com and is 온카지노 operated by TopBet.com. It is 바카라 licensed by the Kenyan Gambling Commission under an RTP of 94.01%.