ಭಾನುವಾರ, ಮೇ 26, 2013

Kannada Bhakthi Chitrageethegalu

೧. ಗಣಪತಿಯೇ ಬುದ್ಧಿದಾತನೆ , ಸಿದ್ಧಿನಾತನೆ
ಸಲಹು ಗಣೇಶ ನೆ ವಿದ್ಯಾಧಿಪನೆ 

ನೀ ನಮ್ಮ ಗೆಲುವಾಗಿ ಬಾ ಗಜಮುಖ ನೆ || ೨॥ 
ಗುರುಕುಲಕೆ ವರವಾಗಿ ಗುರಿತೋರೋ ಗುರುವಾಗಿ 
ಪೋರೆನೀನು ಎಂದೆಂದೂ ಕರುಣಾಳು ಬಾ ಬಂಧು 

ಬಾಳಲ್ಲಿ ಒಂದಾಗಿ ಬಾ  ನಮ್ಮ ಜೊತೆಯಾಗಿ 
ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ ॥  ೨ ॥ 
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ  ॥ ೧ ॥ 

ನಿಧಿಯಾಗಿ , ವಿಧಿಯಾಗಿ ಸುಧೆ ತುಂಬು ಒಲವಾಗಿ  
ಹಿರಿಯಾದ ಸಿರೀ ನೀನು ಈ ಬಾಳ ಸವಿಜೇನು || ೨ ॥ 
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ  ॥ ೨ ॥ 

೨. ಪೂಜಿಸಲೆಂದೆ ಹೂಗಳ ತಂದೆ ದರುಶನ ಕೋರಿ
ನಾ ನಿಂದೆ ,ತೆರೆಯೋ ಬಾಗಿಲನು ರಾಮ

ಮೋಡದ ಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರಥಿ ಉಷೆ ತಂದಿಹಳು , ತಾಮಸವೆಕಿನ್ನು ಸ್ವಾಮಿ
ತೆರೆಯೋ ಬಾಗಿಲನು, ರಾಮ ॥ ೧॥

ಒಲಿದರು ಚೆನ್ನ ಮುನಿದರು ಚೆನ್ನ , ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳದರು ಚೆನ್ನ ಸ್ವೀಕರಿಸು ನನ್ನ ಸ್ವಾಮೀ
ತೆರೆಯೋ ಬಾಗಿಲನು, ರಾಮ ॥ ೨ ॥
http://yourlisten.com/channel/content/16981944/Poojisalande

೩. ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಮನೆಯು ಲಕ್ಹ್ಮೀ ನಿವಾಸ ॥

ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ
ಅಲಮೇಲು ಮಂಗ ಮನ್ನೋಲಾಸ ಲೋಲ ॥ ೧ ॥

ಪಂಕಜ ಲೋಚನ ಪತಿತೋದ್ಧಾರ ಸಂಕಟ ಹರಣ  ಸುಧಾರಸ ಧಾರಾ
ಶಂಕ ಚಕ್ರಧರ ಶ್ರೀಕರ ಸುಂದರ ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರಾ
ಶಿರಸಾ ನಮಾಮಿ ಮನಸಾ ಸ್ಮರಾಮಿ ॥ ೨ ॥
http://yourlisten.com/channel/content/16980711/Tirupati_Girivasa


೪. ಕಮಲದ ಮೊಗದೊಳೆ ಕಮಲದ  ಕಣ್ಣೋಳೆ
ಕಮಲವ ಕೈಯಲ್ಲಿ  ಹಿಡಿದೋಳೆ ,
ಕಮಲನಾಭಾನ ಹೃದಯಿ ಕಮಲದಲಿ ನಿಂತ್ಹೋಳೆ ,
ಕಮಲಿ ನೀ ಕರ ಮುಗಿವೆ ಬಾಮ್ಮ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ  ॥

ಕಾವೇರಿ ನೀರ ಅಭಿಷೆಕಕಾಗಿ ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೊ ಸುಮರಾಶಿ ಇಂದ ಹೂ ಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆ ನಾದ ನಮ್ಮ ಮನೆಯೇಲ್ಲವ ತುಂಬುವಂತೆ
ನಲಿಯುತ ಕುಣಿಯುತ , ಒಲಿದು ಬಾ  ನಮ್ಮ ಮನೆಗೆ ಬಾ ॥ ೧ ॥

ಶ್ರೀದೇವಿ ಬಾಮ್ಮ ಧನಲಕ್ಸ್ಮಿ ಬಾಮ್ಮ ಮನೆಯನ್ನು ಬೆಳಕಾಗಿ ಮಾಡು
ದಯೆ ತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯೆ ವರಮಹಲಕ್ಸ್ಮಿಯೆ ಹರಸು
ಕರವನ್ನು  ಮುಗಿಯುವೆ ಆರತಿ ಈಗ ಬೆಳಗುವೆ || ೨ ॥



೩. ಭಾರತ ಭೂಶಿರ  ಮಂದಿರ ಸುಂದರಿ , ಭುವನ ಮನೋಹರಿ , ಕನ್ಯಾಕುಮಾರಿ ॥

ಸಾಮಗಾನ ಪ್ರಿಯ ಸಾಂಬ ರೂಪಿಣಿ , ಪಾಲಗಡಲ ಸ್ವರ ಪಂಚಮ ಧಾರಿಣಿ  ೨
ಸಾಕಾರ ಷಡ್ಜ್ಯದ ಶರಧಿ ತರಂಗಿಣಿ ,ಸಾಗರ ಸಂಗಮ ಸರಸ ವಿಹಾರಿಣಿ ॥ ೧ ॥

ಶಿವ ತಾಂಡವದ ಢಮರು ನಿನಾದ ,ನಾದ ಬ್ರಹ್ಮ ನ ಓಂಕಾರ ನಾದ ,
ನಾದದೆ  ಲೀನ ಆಗಮ ವೇದ, ನಾದ ವೇದ ಶಿವೆ , ನಿನ್ನ ವಿನೋದ  ॥ ೨ ॥

ಸಂಗೀತ ಸುಧೆಯ ಚೈತನ್ಯ ಧಾರೆ , ಕಣ ಕಣ ನೀನೆ ಕರುಣ ಪೂರೇ
ನವ ಭಾವ ನವ ಜೀವ ನೀ ತುಂಬಿ ,ಬಾರೆ  ನವ ರಸ ವಾಹಿನಿ ನೀ ದಯೆ ತೊರೆ ॥ ೩ ॥




೮.  ಮಹಾಲಕ್ಷ್ಮಿ ಮನೆಗೆ ಬಾರಮ್ಮ ,ನಮ್ಮ ಪ್ರೆಮದಿಂದೊಮ್ಮೆ ನೋಡಮ್ಮ
  ಶುಕ್ರವಾರವೂ ಪೂಜಾ ಸಮಯವೂ  , ನೀ  ಬರದೆ  ಸುಖ ಶಾಂತಿ ಕಾಣೆವು

ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ ಭಾಗ್ಯವ ನೀ ಕೊಡಲರೆಯ
ನಿನ್ನ ಕಾಲ್ಗಳ,ಗೆಜ್ಜೆಯ ನಾದಕೆ ಕುಣಿಯುವ ಯೋಗವ ನೀ ತರಲಾರೆಯ
ಈ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ನಮ್ಮನ್ನು ಹರಸಮ್ಮ ॥ ೧ ॥

ನಿನ್ನ ಸ್ಮರಣೆಯೇ ಮನಕಾನ್ದವು , ನಿನ್ನ ಕರುಣೆಯೇ ಬಾಳಿನ ದೀಪವು
ನೀನಿರುವಾ ಮನೆ ಭೂ ವೈಕುಂಟವು , ನೀನೋಲಿದಾಗಲೇ ಸಿರಿ ಸೌಭಾಗ್ಯವು
ನಮ್ಬಿಹೆ ನಿನ್ನೆ ಕರವನ್ನು ಹಿಡಿದು ,ಅಮ್ಮ ನನ್ನ ನಡೆಸಮ್ಮಾ ॥ ೨ ॥




ಬುಧವಾರ, ಮೇ 1, 2013

Kannada Bhavageethe

೧. ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದನ್ಥೆ
ರಚನೆ: ಎಂ .ಎನ್ ವ್ಯಾಸರಾವ್

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದನ್ಥೆ 
ನನ್ನೆದೆಯ ಕಡಲೇಕೆ ಬೀಗುತಿಹುದು 
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ 
ಗರಿ ಕೆದರಿ ಕನಸುಗಳು ಕಾಡುತಿಹವು ॥ಪ॥ 

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು 
ನಿನ್ನ ಹುಣ್ಣಿಮೆ ನಗೆಯು ಛೆಡಿಸಿಹುದು 
ಬಳಿಗೆ ಬಾರದೆ ನಿಂತೆ , ಹೃದಯ ತುಂಬಿದೆ ಚಿಂತೆ 
ಜೀವ ನಿನ್ನಾಸರೆಗೆ ಕಾಯುತಿಹುದು ॥ ॥ 

ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ 
ನಡುವೆ ಮೈಚಾಚಿರುವಿ ವಿರಹದಳಲು 
ಯಾವ ದೋಣಿಯು ತೇಲಿ ಎಂದು ಬರುವುದೋ ಕಾಣೆ 
ನೀನಿರುವ ಬಳಿಯಲ್ಲಿ ನನ್ನ ಬಿಡಲು || || 

http://yourlisten.com/channel/content/16978026/Ninna_Kangala

೨. ಲೋಕದ ಕಣ್ಣಿಗೆ ರಾಧೆಯು ಕೂಡ
    ರಚನೆ : ಹೆಚ್ .ಯೆಸ್ .  ವೆಂಕಟೇಶ್ ಮೂರ್ತಿ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು  
ನನಗು ಆಕೆ ಕೃಷ್ಣ ನ ತೋರುವ ಪ್ರೀತಿಯು ನೀಡಿದ ಕಣ್ಣು ॥ಪ॥ 

ತಿಂಗಳ ರಾತ್ರಿ ತೊರೆಯ ಸಮೀಪ ,
ಉರಿದರೆ ಯಾವುದೋ ದೀಪ ,
ಯಾರೋ ಮೋಹನ ಯಾವ ರಾಧೆಗೋ 
ಪಡುಥಿರುವನು ಪರಿತಾಪ  ೧ 

ನಾನು ನನ್ನದು ನನ್ನವರೆನ್ನುವ 
ಹಲವು ತೊಡಕುಗಳ ಮೀರಿ ,
ಧಾವಿಸಿ ಸೇರಲು ಬ್ರ್ಹುನ್ದಾವನವ  
ರಾಧೇ ತೊರವಳು ದಾರಿ  ೨ 

ಮಹಾ ಪ್ರವಾಹ ಮಹಾ ಪ್ರವಾಹ , 
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ 
ತೊರೆದರು ತನ್ನ ತೊರೆಯದು ಪ್ರಿಯನ 
ರಾಧೆಯ ಪ್ರೀತಿಯ ರೀತಿ ,  ೩ 


೩.   ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ
     ರಚನೆ : ಎನ್ .ಎಸ್  ಲಕ್ಷ್ಮಿನಾರಾಯಣ  ಭಟ್ಟ

ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ    
ನಾ ತಾಳಲಾರೆ ಈ ವಿರಹ ಕೃಷ್ಣ 

ಕಮಲವಿಲ್ಲದ ಕೆರೆ ನನ್ನ ಬಾಳು 
ಚಂದ್ರನಿಲ್ಲದ ರಾತ್ರಿ ಬೀಳು 
ನೀ ಸಿಗದೇ ಉರಿ ಉರಿ ಕಳೆದೆ ಇರುಳ 
ಮಾತಿಲ್ಲ ಬಿಗಿಧಿದೆ ದುಃಖ ಕೊರಳ  ೧ 

ಅನ್ನ ಸೇರದು ನಿದ್ದೆ ಬಂದುದೆಂದು 
ಕೂಡಿವೆ ಒಂದೇ ಸಮ ಕೃಷ್ಣ ಎಂದು 
ಯಾರು ಅರಿಯರು ಹೇಳು ನನ್ನ ನೋವ 
ತಲ್ಲಣಿಸಿ ಕೂಗುತಿದೆ ದಾಸಿ ಜೀವ ೨ 

ಒಳಗಿರುವ ಗಿರಿಧರನೇ ಹೊರಗೆ ಬಾರೋ 
ಕಣ್ಣೆದುರು ನಿಂತು ಆ ರೂಪ ತೋರೊ 
ಜನುಮ ಜನುಮದ ರಾಗ ನನ್ನ ಪ್ರೀತಿ 
ನಿನ್ನೊಳಗೆ ಹರಿವುದೇ ಅದರ ರೀತಿ  ೩
http://yourlisten.com/channel/content/16979558/nee_sigade 

೩. ನಾನ ಇನಿಯನ ನೆಲೆಯ ಬಲ್ಲೆಯೇನೆ
ರಚನೆ ಎನ್ .ಎಸ್  ಲಕ್ಷ್ಮಿನಾರಾಯಣ  ಭಟ್ಟ

ನಾನ ಇನಿಯನ ನೆಲೆಯ ಬಲ್ಲೆಯೇನೆ   
ಹೇಗೆ ತಿಳಿಯಲಿ ಅದನು ಹೇಳೇ ನೀನೆ ॥ಪ॥ 

ಇರುವೆ ಸರಿಯುವ ಸದ್ಧು, ಮೊಗ್ಗು ಬಿರಿಯುವ ಸದ್ದು 
ಮಂಜು ಇಳಿಯುವ ಸದ್ಧು ಕೇಳಬಲ್ಲ 
ನನ್ನ ಮೊರೆಯನು ಏಕೆ  ಕೆಳಲೊಲ್ಲ  ॥೧ ॥ 

ಗಿರಿಯ ಎತ್ತಲು ಬಲ್ಲ , ಶರಧಿ ಬತ್ತಿಸಬಲ್ಲ 
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ 
ನನ್ನ ಸೇರೆಯನು ಏಕೆ ಬಿಡಿಸಲೊಲ್ಲ  |೨ 

ನೀರು ಮುಗಿಲಾದವನು ,ಮುಗಿಲು ಮಳೆಯಾದವನು 
ಮಳೆ ಬಿದ್ದು , ತೆನೆ ಎದ್ದು ತೂಗುವವನು 
ನನ್ನೀ ಅಳಲನು ಏಕೆ ತಿಳಿಯದವನು  । ೩ 
http://yourlisten.com/channel/content/16979556/Nanna_Iniyana

೪. ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ರಚನೆ  ಎಸ್.ವಿ  ಪರಮೇಶ್ವರ ಭಟ್ಟ್

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ , ಬಂದಂದು ಕಣ್ಣಾರೆ  ಕಂಡನ್ದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ   ॥ಪ ॥

ಕರಿ ಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಹ  ॥ ೧ ॥

ಹಳೆ ಬಾಳು ಸತ್ತಿತ್ತು ಕೊಳೆ ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿ ಗೆ ನೀ ಬೆಳಕಿನ ಆರತಿ
ಬೆಳಗಿ ಕಂದಾರತಿ ದೀಪ ಹಚ್ಚ ||೨ ॥

ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪಥಂಗ
ಸೋತ ಹುಲಿ ಏಳಲಿ ದೀಪ ಹಚ್ಹ
ನನ್ನ ಅಂತರಂಗದಿ  ನಂದದೆ ನಿನ್  ದೀಪ
ನನ್ನ ದೀಪವಾಗಿರಲಿ ದೀಪ ಹಚ್ಹ ॥ ೩ ॥


೫. ಮುಂಗಾರಿನ ಅಭಿಷೇಕಕೆ ಮೆದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ॥ಪ॥

ಬಾಯಾರಿದ ಬಯಕೆಗಳಲಿ ಥಳ ಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿಯಂಥ ಹಸಿರು ॥೧ ॥

ಮೈಮನಗಳ ಕೊಂಬೆಯಲಿ ಹೊಮ್ಮುವ ಧನಿ ಇಂಪು
ನಾಳೆಗೆ ನನಸಾಗುವ ಕನಸಿನ ಹೂವರಳುವ ಕಂಪು ||೨ ॥

ಭರವಸೆಗಳ ಹೊಲಗಳಲಿ ನೇಗಿಲ ಗೆರೆ  ಕವನ
ಶ್ರಾವಣ ದಲಿ ತೆನೆದೂಗುವ ಜೀವೋತ್ಸವ ಗಾನ ॥ ೩ ॥


೬. ಏನೇ ಬರಲಿ ಎಂಥೆ ಇರಲಿ
ರಚನೆ : ಮಾಸ್ತಿ ವೆಂಕಟೇಶ

ಏನೇ ಬರಲಿ ಎಂಥೆ ಇರಲಿ
ಅನುದಿನ ಯಾವ ಅಸುಖ ಸುಖ ತರಲಿ
ಬಾಳ ಗೊಂದಲದ ಕರ್ಕಶದೆದೆಯಲಿ
ಕೆಳುತಿರಲಿ ಹರಿ ನಿನ್ನ ಮುರಳಿ ॥ಪ॥

ನೋವಲೇಪದಲಿ ಬದುಕಿನ ಹಣ್ಣು
ಬಾಯೊಳಗಿರಲು ಎಂಥದೋ ಮಣ್ಣು
ದೃಷ್ಟಿ ಕೆಟ್ಟು ಕತ್ತಲ ನಿಟ್ಟಿಸಿ ನಿಲ್ಲೇ
ಕಾಣಲಲ್ಲಿ ದೊರೆ ನಿನ್ನ ಕಣ್ಣು ॥ ೧ ॥

ಮೆತ್ತನ ಹಾಸಿಗೆ ಮುಳ್ಳಿನೊಳಾಗಿ
ಭೇನೆಯ ಖನೆ ಆತ್ಮವನೆ ತಾಗಿ
ಇನ್ನು ಏನು ಗತಿ ಎನ್ನುವ ವೇಳೆ
ಕೈ ಹಿಡಿದಿರು ಕರುಣೆ ನೀನಾಗಿ || ೨ ॥

೭. ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ
ರಚನೆ: ಬಿ ಆರ್ .ಲಕ್ಷ್ಮಣ್ ರಾವ್

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ
ಸಿಕ್ಕ ಮೀನು ಮಿಡುಕಾಡುತಿರುವೆ ನಾನು
ಕಡಿಯೋಲಲ್ಲೇ ನೀನ್ ಕರುಳ ಬಳ್ಳಿ
ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ  ॥ಪ॥

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ
ಎಷ್ಟು ದಿನ ದೂಡು ಹೊರಗೆ ನನ್ನ
ಓಟ ಕಲಿವೆ ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವಗಮನ , ಓ ಅಗಾಧ ಗಗನ ।। ೧ ॥

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಇಂಧನ ತೀರಲು ಬಂದೆ ಬರುವೆನು
ಮತ್ತೆ ನಿನ್ನ ತೊಡೆ ಗೆ , ಮೂರ್ತ ಪ್ರೇಮದೆಡೆಗೆ ॥ ೨॥
http://yourlisten.com/channel/content/16979548/AmmaNinna


೮. ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾಧಿ
ರಚನೆ: ಬಿ ಆರ್ .ಲಕ್ಷ್ಮಣ್ ರಾವ್

ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾಧಿ
ಹತಾಶೆಯಲ್ಲೆನಿದೆ ಬರಿ ಶೂನ್ಯ ಬರಿ ಬೂದಿ

ಕೊಚ್ಚಿದಷ್ಟು  ಹೆಚ್ಚಿ ಬರುವ ಸೃಷ್ಟಿ  ಶೀಲ ಪ್ರಕೃತಿ
ಉಬ್ಬೆಯಲ್ಲೂ ಹುಳಿ ನೀಗಿದ ಸಿಹಿ ಹಣ್ಣಿನ ಪ್ರೀತಿ
ಅದುಮಿದಸ್ಟು  ಚಿಮ್ಮಿ ಬರುವ ಚೈತನ್ಯ ದ ಚಿಲುಮೆ
ಇಂದು ನಮ್ಮ ಯತ್ನ ಗಳಿಗೆ ಇದೆ ತಕ್ಕ ಪ್ರತಿಮೆ ॥ ೧॥

ಜೋಪಡಿಯಲು ಜೋಗುಳ ಅಂಗಳದಲಿ ಹೂ ಹಸೆ
ಕೊಳೆಗೆರೆಯ ಕೊಚ್ಚೆಯಲ್ಲೂ ಮಗು ಗುಲಾಬಿ ನಗೆ
ಚಿನ್ದಿಯಲ್ಲೂ ಹಿಗ್ಗೋ ಹರೆಯ ನೂರು ಕನಸು  ಕವಿತೆ
ಹಟ್ಟಿಯಲ್ಲು  ಹುಟ್ಟು ಹಬ್ಬ ಮುಮ್ಬೇಳಗಿನ ಹಣತೆ  || ೨ ॥

 ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೆ ಇಟ್ಟಿಗೆ
ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊತ್ತಿಗೆ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಎ ಹತಾಶೆ ಕೂಡ ಸ್ವಾರ್ಥ ॥೩ ॥
http://yourlisten.com/channel/content/16979547/Bhavageethe


೯.ಯಾವ ರಾಗಾಕೋ ಏಕೋ ನನ್ನೆದೆ ವೀಣೆ ಮಿಡಿಯುತ ನರಳಿದೆ
ರಚನೆ : ಜೆ . ಎಸ್  . ಶಿವರುದ್ರಪ್ಪ

ಯಾವ ರಾಗಾಕೋ ಏಕೋ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವ ರಾಗ ಹೊಮ್ಮದೇ ಬೇರೆ ನಾದಗಳೆದಿದ್ದೆ ॥ಪ॥

ಉದಯ ಅಸ್ಥದ ಎದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಳ  ಭೇಗೆಗೆ ತಣಿಲ  ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸುತಿಹ ಬಿರುಗಾಳಿ   ಅಬ್ಭರದೆದೆಗೆ  ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಇಡಿಯೇ ಬಯಸುತ ಸೋತಿತು ॥ ೧ ॥

ಮುಗಿಲ ತಾರೆಯ ರಜತ ನಂದನದೊಳಗೆ ಧನಿಯನು ಹುಡುಕಿತು
ಸರ್ವ ಋತುಗಳ ಕೋಶ  ಕೋಶ ಕೆ ನುಗ್ಗಿ ತೃಪ್ತಿಯ ಅರಸಿತು
ಏನೇ ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ , ಮೂಕವಾಗಿದೆ ಹೃದಯವು  || ೨॥
http://yourlisten.com/channel/content/16979560/yaava_raaga

೧೦ . ನಿನ್ನದೇ ನೆಲೆ ನಿನ್ನದೇ ಜಲ ನಿನ್ನದೇ ಆಕಾಶ
ರಚನೆ : ಜಿ .ಎಸ್ . ಶಿವರುದ್ರಪ್ಪ

ನಿನ್ನದೇ ನೆಲೆ ನಿನ್ನದೇ ಜಲ ನಿನ್ನದೇ ಆಕಾಶ
ಕಿಂಚಿತ್ತು ಅನುಮನಾಕೆ ಇಲ್ಲವೋ ಅವಕಾಶ

ಈ ನದಿಗಳು ಶತಮಾನವು ಬೆಳೆದ ಕನಸು ನಿನ್ನದೇ
ಈ ಜನತೆಯು ಬೆವರು ಸುರಿಸಿ ದುಡಿದ ನನಸು ನಿನ್ನದೇ ॥ ೧ ॥

ಗಡಿಯುದ್ಧಕ್ಕು ಸಿಡಿ ಗುಂಡಿಗೆ ಒಡ್ಡಿದ ಎದೆ ನಿನ್ನದೇ
ಹಿಮಾಲಯದ ಶಾಂತಿಯಲ್ಲಿ ಎತ್ತಿದ ತಲೆ ನಿನ್ನದೇ  || ೨ ॥

ನೂರಾಸೆಯ ಹೆಗಲೇರಿಸಿ ನಡೆದ ದಾರಿ ನಿನ್ನದೇ
ಬರುವ ದಿನದ ಭರವಸೆಗಳ ಬೆಳೆವ ಹೊಣೆಯು ನಿನ್ನದೇ ॥ ೩ ॥
http://yourlisten.com/channel/content/16983499/Ninnade_Nela


೧೧. ಇದಾವ ರಾಗ ಮತ್ತೆ ಇದಾವ ರಾಗ
ರಚನೆ : ಜಿ .ಎಸ್ . ಶಿವರುದ್ರಪ್ಪ

ಇದಾವ ರಾಗ ಮತ್ತೆ ಇದಾವ ರಾಗ
ಎದೆಯಾಳದಿನ್ದೆದ್ದು ನಭ ನೀಲಿಗೆರುತಿದೆ  ॥ಪ॥

ಯುಗ ಯುಗಾನ್ಥರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ
ಬಗೆಯ ಬಾನ್ ಬಯಲಿನಲ್ಲಿ ಮೋಡಗಳ ಕವಿಸುತಿದೆ ॥ ೧ ॥

ಹಚ್ಚ ಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝುಮ್ಮೆಂದು ನಡುಗಿಸಿದೆ
ಸುಪ್ತ ಜ್ವಾಲಾಮುಖಿಯತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೋರಸಿ ಬೆರೆದು ಬರೆಯುತಿದೆ ॥ ೨ ॥
http://yourlisten.com/channel/content/16979550/Idu_yaava_Raaga

೧೨ . ಕರುಣಾಳು ಬಾ ಬೆಳಕೆ
ರಚನೆ : ಬಿ . ಎಂ ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ,ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನನ್ನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ,
ಕೈ ಹಿಡಿದು ನಡೆಸೆನನ್ನು ॥ ಪ ॥

ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೆಳನೊಡನೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನನ್ನು॥ ೧ ॥

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯ
ಬೆಳಗಾಗ ಹೊಳೆದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ  ॥ ೨ ॥
http://yourlisten.com/channel/content/16983483/KarunaaLU


೧೩ . ಎದೆಯು ಮರಳಿ ತೊಳಲುತಿದೆ , ದೊರೆಯದುದುನೆ ಹುಡುಕುತಿದೆ
ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ  ತನ್ನ  ಕುಡಿಯನು॥ ಪ॥

ಸಿಗಲಾರದ ಆಸರಕೆ ಕಾದ ಕಾವ ಬೇಸರಕೆ ,
ಮಿಡುಕಿ ದುಡುಕಲೆಳಸುತಿದೆ ತನ್ನ ಗಡಿಯನು ॥ ೧ ॥

ಅದಕು ಇದಕು ಅಂಗಲಾಚಿ ತನ್ನೊಲವಿಗೆ ತಾನೆ  ನಾಚಿ,
ದಡವ ಮುಟ್ಟಿ ಮುಟ್ಟದೊಲು , ಹಿಂದೆಗೆಯುವ ವೀಚಿ ವೀಚಿ ,
ಮುರುಟುತಲಿವೆ ಮನದಲಿ  ॥ ೨ ॥

ನೀರದಗಳ ದೂರ ತೀರ ಕರೆಯುತಲಿದೆ ಎದೆಯ ನೀರ
ಮೀರುತಲಿದೆ ಹೃದಯ ಬಾರಾ ತಾಳಲೆಂತು ನಾ
ಯಾವ ಬಲವು ಯಾವ ಒಲವು , ಕಾಯಬೇಕು ಅದರ ಹೊಳವು
ಕಾಣದೆ ದಳ್ಳಿಸಲು  ಮನುವು, ಬಾಳಲೆಂತು ನಾ ॥ ೩ ॥
http://yourlisten.com/channel/content/16983484/Edeyu_Marali



೧೪ . ನೀನು ಮುಗಿಲು , ನಾನು ನೆಲ , ನಿನ್ನ ಒಲವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ  ॥ ಪ ॥

ನಾನು ಎಳೆವೆ, ನೀನು ಮಣಿವೆ ,ನಾನು ಕರೆವೆ ನೀನು ಸುರಿವೆ ,
ನಮ್ಮಿಬರ ಒಲುಮೆ ನಲುಮೆ ಜಗಕಾಇತು ಹುಣ್ಣಿಮೆ
ನಾ ಅಚಲದ ತುಟಿ ಎತ್ತುವೆ ನೀ ಮಳೆಯೊಳು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ  ॥ ೧ ॥

ಸೂರ್ಯ ಚಂದ್ರ ಚಿಕ್ಕೆಗಣ್ಣ ತೆರೆದು ನೀನು ಸುರಿವ ಬಣ್ಣ
ಹಸಿರಾಯಿತು , ಹೂವಾಯಿತು ಚೆಲುವಾಯಿತು ಈ ನೆಲ
ನೀನು ಗಂಡು ನಾನು ಹೆಣ್ಣು , ನೀನು ರೆಪ್ಪೆ ನಾನು ಕಣ್ಣು ,
ನಮ್ಮಿಬರ ಮಿಲನದಿಂದ ಸುಫಲವಾಯಿತು ಜೀವನ ॥ ೨ ॥
http://yourlisten.com/channel/content/16983494/neenu_Mugilu


೧೫ . ನೀನಿಲ್ಲದೆ ನನಗೇನಿದೆ ಮನಸೆಲ್ಲ ನಿನ್ನಲೇ ನೆಲೆಯಾಗಿದೆ ,
ಕನಸೆಲ್ಲ ಕಣ್ಣಲ್ಲೇ ಸೆಲೆಯಾಗಿದೆ ॥ ಪ ॥

ನಿನಗಾಗಿ ಕಾದು ಕಾದು  ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು ನೀನ್ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀನ್ ತುಂಬಿದೆ,
ಬೆಳಕೊಂದೆ ನಿನ್ನಿಂದ ನಾ ಬಯಸಿದೆ  ॥ ೧ ॥

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ ,
ಒಣಗಿರುವ ಎದೆ ನೆಲದಲ್ಲಿ ಭರವಸೆಯ ಜೀವ ಹರಿಸಿ ,
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ  ॥ ೨ ॥

೧೬ . ತಪ್ಪಿ ಹೋಯಿತಲ್ಲೇ ಚುಕ್ಕಿ , ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ  ಹಕ್ಕಿ ಹಾಡು ,
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ ,
ಮುರಿದು ಹೋಯಿತೆ ಈಗ ಅ ಪುಟ್ಟ ಗೂಡು  ॥ ಪ ॥

ಹನಿ ಹನಿಯಾಗಿ ತೆನೆದು ತೂಗಿದ ಪ್ರೀತಿ
ಹರಿದು ಚೂರಯಿತೆ ಎದೆಯ ಒಲವಿನ ಬೀಡು
ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ ,
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು  ॥ ೧ ॥

ಎಲ್ಲಿ ಹೋಯಿತು ವಲಸೆ ಗೂಡು ತೊರೆದ ಹಕ್ಕಿ
ಸೇರಿ ಹೋಯಿತೆ ನೀನಿ ಮುಗಿಲ ಮರೆಯ ನಾಡು
ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ
ಮುಂದೆ ಬಯಲು , ಹಿಂದೆ ಬಿದ್ದಿತು ಕಾಡು ಮೇಡು ॥ ೩ ॥
http://yourlisten.com/channel/content/16986918/TappiHoyitalle


೧೭ . ಅಮ್ಮ ಹಚ್ಚಿದೊಂದು ಹಣತೆ
ರಚನೆ : ಏಮ್. ಆರ್ . ಕಮಲಾ

ಅಮ್ಮ ಹಚ್ಚಿದೊಂದು ಹಣತೆ , ಇನ್ನು ಬೆಳಗಿದೆ
ಮನಕೆ ಮಬ್ಬು ಕವಿಯಾದಂತೆ ಸದಾ ಕಾದಿದೆ  ॥ ಪ ॥

ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು
ದೊರದಲ್ಲಿ ತೀರವಿದೆ ಎಂದು ತೋರಲು ॥ ೧ ॥

ಕೃತಕ ದೀಪ ಕತ್ತಲಲ್ಲಿ ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ  ॥ ೨ ॥

ಅಂತರಂಗದಲ್ಲಿ ನೂರು ಕಗತ್ತಲ ಕೋಣೆ ,
ನಾದ ಬೆಳಕ ತುಂಬಲು ಮಿಡಿದ ಹಾಗೆ ವೀಣೆ  ॥ ೩ ॥
http://yourlisten.com/channel/content/16983487/Amma_Hacchidondu

೧೮ . ಬಾವದೊಂದು ವೀಣೆ ದೋಣಿ
ರಚನೆ : ಏಮ್. ಆರ್ . ಕಮಲಾ

ಬಾವದೊಂದು ವೀಣೆ ದೋಣಿ ಮುರಿದು ಬಿದ್ದಿತ್ತು
ತಂತುಗಳು ಸಡಿಲಾಗಿ ಕಳಚಿ ಕೊಂಡಿತು ॥ ಪ ॥

ಅಣ್ಣ ಅಕ್ಕ ತಮ್ಮನೆಂದು ಹಿಗ್ಗಿ ಕುಣಿಯುತ
ಒಂದೇ ದೋಣಿಯಲಿ ಪಯಣ  ಬೆಳೆಸಿರುವಾಗ ,
ಎದೆಯ ಹೊಳೆಗೆ ಯಾವ ಕೊಳೆಯು ಕೂಡಿಕೊಂಡಿತು
ಹಾಲ ಕಡಲಿನ್ನಲಿ ಹುಳಿಯ ಬಿಂದು ಸೇರಿತು ॥ ೧ ॥

ಅಮೃತಕ್ಕು ಮೊದಲು ಉದಿಸಿತೆ ಹಾಲಾಹಲ ,
ಅದನೆ ಹಂಚಿ ಕುಡಿಯಲು ಕಾದಡಿದೆವು ,
ಅವರವರ ಕನಸನರಸಿ ಅವರೆ  ದ್ವೀಪವಾದರು
ನಡುವೆ ಹರಿದ ದೋಣಿಯನ್ನೇ ತೊರೆದು ಬಿಟ್ಟರು ॥ ೨ ॥
http://yourlisten.com/channel/content/16983489/Bhavadondu_veene



೧೯ . ಉಡುಗಣವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿ ,
ಕಣ್ಣ ನೀರಿನಲಿ, ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ  ॥ ಪ ॥

ಕೋಟಿ ಸೂರ್ಯಕರ , ತೇಜ ಪುಂಜ ಥರ ,
ವಿದ್ಯುತ್ರಾರ್ಜಿಥ ರಥಗಾಮಿ ,
ಉಳುತಿಹ ರೈತನ ನೇಗಿಲ ಸಾಲಿನ
ಮಣ್ಣಿನ ರೇಖಾ ಪಥಗಾಮಿ ॥ ೧ ॥

ಬಾಂದಳ ಚುಂಬಿತ ಶುಭ್ರ  ಹಿಮಾವೃತ
ತುಂಗ ಶೃಂಗದಲಿ ಗೃಹ ವಾಸಿ
ದೀನಾನತರ ದುಃಖಿ ದರಿದ್ರ
ಮುರುಕು ಗುಡಿಸಿಲಲಿ ಉಪವಾಸಿ ॥  ೨ ॥
http://yourlisten.com/channel/content/16983490/Udugana



೨೦ . ಯಾರ ಹಾಡ ಕೊರಳಾಗಿ , ಒಳ ದನಿಯ ಮರೆತೇನೋ
ಯಾರ ವೀಣೆ ಬೆರಳಾಗಿ ಅಪಸ್ವರವ ಮಿಡಿದೇನೋ ॥ ಪ ॥

ಯಾವ ವೇಷ ತೊಟ್ಟು ನಾನು , ರಂಗದಲ್ಲಿ ಕುಣಿದೇನೋ
ಯಾವ ಗೆಜ್ಜೆ ನಾದಕಾಗಿ ಪಾದವನ್ನೇ ತೆತ್ತೇನೋ ॥ ೧ ॥

ಯಾವ ಜೀವ ಬೆಳಗಲೆಂದು ದೀಪವಾಗಿ ಉರಿದೇನೋ
ಯಾರ ಪಯಣ ಸಾಗಲೆಂದು ,ಹಾದಿಯಾಗಿ ಹರಿದೇನೋ ॥ ೨ ॥

ಯಾರ ಕನಸ ಕಟ್ಟ ಹೋಗಿ ಬಣ್ಣಗೆಟ್ಟು ನಿಂತೇನೋ ,
ಎದೆಯ ನೋವು ಹಾಡಗದೆ ಬರಿಯ ಶಬ್ಧವಾದೇನೋ ॥ ೩ ॥
http://yourlisten.com/channel/content/16983491/Yaara_Haada_KoraLagi


೨೧. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ರಚನೆ : ಎನ್. ಎಸ್  ಲಕ್ಷ್ಮಿನಾರಾಯಣ್ ಭಟ್ಟ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು , ನಾವು ನಮ್ಮ ಅಂತರಾಳವ ?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿವುದೇನು ಹಾಯಿ ದೋಣಿಗೆ ॥ ೧ ॥

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೆನು ನೀಲಿ ಬಾನಿಗೆ ॥ ೨ ॥

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯೇತೆ ಕನ್ನಡಿಯ ಪಾಲಿಗೆ ॥ ೩  ॥
http://yourlisten.com/channel/content/16983492/Istu_Kaala

೨೨ .  ಅಳುವ ಕಡಲೊಳು ತೇಲಿ ಬರುತಲಿದೆ
ರಚನೆ : ಎಂ  ಗೋಪಾಲ ಕೃಷ್ಣ ಅಡಿಗ

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಬಾಳ  ಗಂಗೆಯ ಮಹಾ ಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆ ತೆರೆಗಳೊಳಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ  ॥ ಪ ॥

ಆಸೆ ಬೂದಿ ತಳದಲ್ಲೂ ಕೆರಳುತಿವೆ  ಕಿಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲು ಕಂಡೀತು  ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲೂ ಭಿನ್ನತೆಯ ವಿಕಟ ಹಾಸ್ಯ ॥ ೧ ॥

ಎತ್ತರೆತ್ತರಕೆ ಏರುವ ಮನಕು ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲಿ ಮುಳುಗಿ ಕಂಡೆನು ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮಧಗಾದ ಹೊನಲಲ್ಲು ಹೊಳೆಯುತಿದೆ ಸತ್ವವೊಂದ ಕಂಡ ॥ ೨ ॥

ಆಸೆ ಎಂಬ ತಳ ಒಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ, ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವು ತನದ ಮೈ ಮರೆಸುವಾಟವಿದು ನಿಜವು ತಿಳಿವುದಲ್ಲ ॥ ೩ ॥
http://yourlisten.com/channel/content/16986922/AluvaKadaLoLu


 ೨೩. ಅಮ್ಮ ನಾನು ದೆವರಾಣೆ ಬೆಣ್ಣೆ
ರಚನೆ : ಹೆಚ್ . ಎಸ್ ವೆಂಕಟೇಶ್ ಮೂರ್ತಿ

ಅಮ್ಮ ನಾನು ದೆವರಾಣೆ ಬೆಣ್ಣೆ ಕದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ  ॥ ಪ ॥

ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೇ ತೆಗಯಲಿ ಅಮ್ಮ ನನ್ನ ಪುಟ್ಟ ಕೈಗಳ್ಳಲ್ಲಿ ॥ ೧ ॥

ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ
ಬೆಣ್ಣೆ ಒರಸಿದ ಕೈಯಾ ಬೆನ್ನ ಹಿಂದೆ ಮರೆಸುತ್ತ ॥ ೨ ॥

ಎತ್ತಿದ ಕೈಯ ಕಡಗೋಲನ್ನು , ಮೂಲೆಲೆಟ್ಟು ನಕ್ಕಳು ಗೋಪಿ
ಸೂರ ದಾಸ ಪ್ರಿಯ ಶ್ಯಾಮನ ,ಮುತ್ತಿಟ್ಟು ನಕ್ಕಳು ಗೋಪಿ ॥ ೩ ॥



೨೫ . ಒಂದೇ ಬಾರಿ ನನ್ನ ನೋಡಿ
ರಚನೆ : ದ ರ ಬೇಂದ್ರೆ

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ  ಹೋದ ಹಿಂದ ನೋಡದ
ಗೆಳತಿ ಹಿಂದ ನೋಡದ

ಗಾಳಿ ಹೆಜ್ಜೆ ಹಿಡದ ಸುಗಂಧ ,ಅತ್ತ ಅತ್ತ ಹೋಗು ಅಂದ
ಹೋತ ಮನಸು ಅವನ ಹಿಂದ , ಹಿಂದ ನೋಡದ
ಗೆಳತಿ ಹಿಂದ ನೋಡದ ॥ ೩ ॥

ನಂದೇ ನಂಗೆ ಎಚ್ಚರಿಲ್ಲ , ಮಂದಿ ಗೊಡವಿ ಎನ ನನಗ 
ಒಂದೇ ಅಳತಿ ನಡದದ ಚಿತ್ತ ,ಹಿಂದ ನೋಡದ
ಗೆಳತಿ ಹಿಂದ ನೋಡದ ॥ ೨ ॥

ಸೂಜಿ ಹಿಂದ ದಾರದಾಂಗ , ಕೊಳ್ಳದೊಳಗ ಜಾರಿದಂಗ
ಹೋತ ಹಿಂದ ಬಾರದಂಗ,ಹಿಂದ ನೋಡದ
ಗೆಳತಿ ಹಿಂದ ನೋಡದ  ॥ ೩ ॥
http://yourlisten.com/channel/content/16986925/Ondebaari


೨೬ .ಯಾವ ಮೋಹನ ಮುರಳಿ
ರಚನೆ : ಎಮ್.   ಗೋಪಾಲ ಕೃಷ್ಣ ಅಡಿಗರು

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂದನ ಚುಂಬನ 
ಬಯಕೆ ತೋಟದೊಳಗೆ ಬೇಲಿಯೊಳಗೆ ಕರಣಗಣದಿ ರಿಂಗಣ  ॥ ೧ ॥

ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಖ ಮರ್ಮರ ಇಂದು ಇಲ್ಲಿಗೆ ಹಾಯಿತೆ ॥ ೨ ॥

ವಿವಶವಾಯಿತು ಪ್ರಾಣಹ , ಪರವಶವು ನಿನ್ನಿ ಚೇತನ
ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೇ ಜೀವನ  ॥ ೩ ॥
http://yourlisten.com/channel/content/16986926/YaavaMohana



೨೭ .ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು
ರಚನೆ : ಕೆ .ಎಸ್ . ನರಸಿಂಹ ಸ್ವಾಮಿ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ , ನಿನ್ನೊಲುಮೆ ನನ್ನ ಕಂಡು ।।ಪ।।

ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ಮೀವುದಂತೆ
ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ ।। ೧।।

ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ , ಒಳಗಡಲ ರತ್ನ ಪುರಿಗೆ
ಅಲೆಯುಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ , ಒಳಗಡಲ ಮೂರ್ತಿ ಮಹಿಮೆ ॥ ೨ ॥


೨೮ . ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ರಚನೆ : ಕೆ. ಎಸ್ ನರಸಿಂಹ ಸ್ವಾಮಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದಜಿಂಕೆಯ ಕಣ್ಣಿನ ಮಿಂಚಾಗುವ ಆಸೆ  ॥ ೧ ॥

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ  ॥ ೨ ॥

ಸಿಡಿಲನು ಕಾರುವ ಬಿರಿಮಳೆಗಂಜದೆ ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನತಿರುವಿಗೆ ದೀಪವನಿಡುವಾಸೆ ॥ ೩ ॥

೨೯ . ಮೂಡಲ ಮನೆಯ ಮುತ್ತಿನ ನೀರಿನ
ರಚನೆ ದ ರ ಬೇಂದ್ರೆ

 ಮೂಡಲ ಮನೆಯ ಮುತ್ತಿನ ನೀರಿನ ,ಎರಕಾವ ಹೊಯ್ದ
ನುಣ್ಣನೆ ಎರಕಾವ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲ ತೊಯ್ದ ,
ದೇವನು ಜಗವೆಲ್ಲ ತೊಯ್ದ ॥ ಪ ॥

ಎಲೆಗಳ ಮೇಲೆ ಹೂಗಳ ಒಳಗೆ ,ಅಮೃತದ ಬಿಂದು
ಕಂಡವು ಅಮೃತದ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ ಇಲ್ಲಿಗೆ ಇದ ತಂದು
ಈಗ ಇಲ್ಲಿಗೆ ಇದ ತಂದು ॥ ೧ ॥

ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳ ಹಾಡು
ಗಂದರ್ವರ ಸೀಮೆಯಾಯಿತು ಕಾಡಿನ ನಾಡು
ಕ್ಷಣದೊಳು ಕಾಡಿನ ನಾಡು ॥ ೩ ॥
http://yourlisten.com/channel/content/16986927/Moodala_maneya


೩೦ . ದೋಣಿ ಸಾಗಲಿ ಮುಂದೆ
ರಚನೆ : ಕುವೆಂಪು

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ।।ಪ।।

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷ ಲೋಕವ ವಿರಚಿಸಿ
ನೋಡಿ ಮೂಡಣದ  ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಳುವೆಯಾಚೆಗೆ ಸುಪ್ರಭಾತವ ಬಯಸಿರಿ ।।೧।।

ತೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚು ತಿರ್ಪುವು ಮೂಡುತೈತರೆ ಬಾಲ ಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ ।।೨।।

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೊಡವ ನೋಡಿರಿ
ಅದನೆ ಹೊಳುಥ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ದೇವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ , ಇಂದು ಇಂದಿಗೆ , ಇರಲಿ ನಾಳೆಯು ನಾಳೆಗೆ ।।೩।।

http://yourlisten.com/channel/content/16986928/DoniSaagali_

೨೪ . ಸುಂದರ ದಿನ ಸುಂದರ ಇನ
ರಚನೆ : ಕುವೆಂಪು

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ
ಎಳೆ ಬಿಸಿಳೊಳು ತಿಳಿ ಗೊಳದೊಳು  ಜಲದಲೆಗಳು ನಲಿ  ನಲಿಯಲು
ನೋಡು ಬಾ ಕೂಡು ಬಾ  , ಬೇಗ ಬಾ ಬಾ ಬಾ ॥ ಪ ॥

ತಣ್ಣೆಲರಲಿ ಹೂಗಳ ಬಳಿ ಸೊಕ್ಕಿದ ಅಳಿ ನೋಡು ಬಾ
ಹೊಸ ತಳಿರೊಳು ಇಂಗೊರಳೊಲು ಕೋಗಿಲೆಗಳು ಸ್ವರಗಯಲ್ಲೂ
ಹಾಡು ಬಾ , ಕೂಡು ಬಾ ಬೇಗ ಬಾ ಬಾ ಬಾ ॥ ೧ ॥

ಜೊತೆಇಲ್ಲದೆ ನನ್ನೋಲಿದೆದೆ ಕಂಪಿಸುತಿದೆ ಕೂಡು ಬಾ
ಹೊಸ ಹಸುರೆಡೆ ತಿಳಿ ಗೊಳದೆಡೆ ನಾ ನಿನ್ನೆಡೆ ನೀ ನನ್ನೆಡೆ
ಕೂಡು ಬಾ ಹಾಡು ಬಾ , ಬೇಗ ಬಾ , ಬಾ ಬಾ ॥ ೨ ॥


೨೩ . ಬಿದ್ದಿಯಬ್ಬೇ ಮದುಕಿ ಬಿದ್ದೀಯಬ್ಬೆ
ರಚನೆ : ಸಂತ ಶಿಶುನಾಳ ಶರೀಪರು

ಬಿದ್ದಿಯಬ್ಬೇ ಮದುಕಿ ಬಿದ್ದೀಯಬ್ಬೆ
ನೀ ದಿನ ಹೋದಾಕಿ ,ಇರು ಬಾಳ ಜೋಕಿ ॥ ಪ ॥

ಸದ್ಯಕಿದು ಹುಲುಗುರ ಸಂತಿ , ಗದ್ದಲದೊಳಗ್ಯಾಕ ನಿಂತಿ
ಬಿದ್ದು ಇಲ್ಲಿ ಒದ್ದಾಡಿದರ , ಎದ್ದು ಹೇಂಗ  ನೀನು ಹಿಂದಕೆ ಬರತಿ
ಬುದ್ಧಿ ಗೆಡಿ ಮದುಕಿ ನೀನು , ಬಿದ್ದಿಯಬ್ಬೇ ॥ ೧ ॥

ಬುಟ್ಟಿಯಲ್ಲಿ ಪತ್ತಳ ಇತ್ತಿ ಅದನ ಉಟ್ಟ  ಹೊತ್ತಳು ಜೋತಿ
ಕೆಟ್ಟ ಗಂಟಿ  ಚೌಡೆರು ಬಂದು ಉಟ್ಟದನ್ನೇ  ಕದ್ದರು ಜೋಕಿ
ಬುದ್ಧಿಗೇಡಿ ಮದುಕಿ ನೀನು , ಬಿದ್ದಿಯಬ್ಬೇ ॥ ೨ ॥

ಶಿಶುನಾಳ ಧೀಶನ ಮುಂದೆ ಕೊಸರಿ ಕೊಸರಿ ಹೋಗಬೇಡ
ಹಸನವಿಲ್ಲ ಹರೆಯ ಸಂದ ಪಿಸುರು ಪಿಚ್ಚುಗಣ್ಣಿನ ಮುದುಕಿ

ಬುದ್ಧಿಗೇಡಿ ಮದುಕಿ ನೀನು , ಬಿದ್ದಿಯಬ್ಬೇ ॥ ೩ ॥

೨೪ . ಅಳಬೇಡ ತಂಗಿ ಅಳಬೇಡ ,
ರಚನೆ : ಸಂತ ಶಿಶುನಾಳ ಶರೀಪರು 

ಅಳಬೇಡ ತಂಗಿ ಅಳಬೇಡ ,
ನಿನ್ನ ಕಳುಹ ಬಂದವರಿಲ್ಲಿ ಉಳುಹಿಕೊಂಬವರಿಲ್ಲ 

ಕಡಿಕಿಲೆ ಉಡಿಯಕ್ಕಿ ಹಾಕಿದರವ್ವ 
ಒಳ್ಳೆ ದುಡಿಕಿಲ್ಲೇ ಮುಂದಕ್ಕೆ ನೂಕಿದರವ್ವ 
ಮಿಡಿಕ್ಯಾಡಿ ಮದ್ವಯಾದಿ ಮೋಜು ಕಾಣವ್ವ 
ಕುಡುಕ್ಯಾದಿ ಮಾಯಾವಿ ಮರವೇರಿತವ್ವ 

ರಂಗೇಲಿ ಉಟ್ಟಿದಿ ರೇಷ್ಮೆ ತಡಿ ಸೀರಿ 
ಹನ್ಗವ್ವೋ ನಿನ್ ಪರವಿ ಮರೆತ್ತವ್ವೋ ನಾರಿ 
ಮಂಗಳ ಮೂರುತಿ ಶಿಶುನಾಳ ಧೀಶನ 
ಅಂಗಳಕ ನೀ ಹೊರತು ಅದ್ಯವ್ವ ಗೌರಿ


೨೫ . ತೊರೆದು ಹೋಗದಿರು ಜೋಗಿ 
ಅಡಿಗೆರಗಿದ ಈ ಧೀನಳ ಮರೆತು ಸಾಗುವೆ ಏಕೆ ವಿರಾಗಿ 

ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ಧೀಕ್ಷೆ ಎನಗೆ 
ನಿನ್ನ ವಿರಹದಲೆ ಉರಿದು ಹೋಗಲು ಸಿದ್ಧಳಿರುವ ನನಗೆ ॥ ೧ ॥  

ಹೂಡುವೆ ಗಂಧದ ಚಿತೆಯ , ನಡುವೆ ನಿಲುವೆ ನಾನೇ 
ಉರಿಸೋಕಿಸು ಪ್ರಭುವೇ ಚಿತೆಗೆ ಪ್ರೀತಿಯಿಂದ ನೀನೆ  ॥ ೨ ॥ 

 ಉರಿದು ಉಳಿವೆನು ಬೂದಿಯಲಿ ಲೀಪಿಸಿಕೋ ಅದ ಮೈಗೆ 
ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ ॥ ೩॥


೨೬ .ಭೂಮಿನ್ ತಬ್ಬಿದ್ದ್ ಮೋಡಿದ್ನ್ದಂಗೆ
ರಚನೆ : ಜಿ ಪಿ. ರಾಜರತ್ನಂ 
 ಭೂಮಿನ್ ತಬ್ಬಿದ್ದ್ ಮೋಡಿದ್ನ್ದಂಗೆ
ಬೆಳ್ಳಿ ಬಳ್ದಿದ್ ರೋಡ್ ಇದ್ದಂಗೆ , ಸಾಫಗಳ್ಳ ಥಿಟ್ಟಿಲನ್ದಂಗೆ
ಮಡಿಕೇರಿ ಮೇಲೆ ಮಂಜು  ॥ ೨ ॥

ಮಡ್ಗಿದಲ್ಲೇ ಮಡ್ಗಿದಂಗೆ , ಲಂಗರ್ ಬಿದ್ದಿದ್ ಅಡ್ಗಿದಂಗೆ ,
ಸೀಥಕ್ಕ್ ಸಕ್ತಿ ಉಡ್ಗೊದಂಗೆ , ಅಳ್ಳಾಡಲ್ದು ಮಂಜು
ತಾಯಿ ಮಗೀನ್ ಎತ್ತ್ಕೊಂಡಂಗೆ , ಒಂದಕ್ಕೊಂದು ಅಪ್ಪ್ಕೊಂಡಂಗೆ
ಮಡ್ಕೆರಿನ ಎದೆಗೊತ್ತ್ಕೊಂಡು ಜೂಗಡ್ತಿತ್ತು ಮಂಜು  ॥ ೧ ॥

ಮಲ್ಗಾಕ್ ಸೊಳ್ಳೆ ಪರದೆ ಕಟ್ಟಿ ಹೊದೆಯಕ್  ಕೊಬ್ಬಿದ ದುಪ್ಟಿ ಕೊಟ್ಟಿ
ಪಕ್ಕದಾಗ್ ಗಂಧದ  ಧೂಪ ಹಾಕ್ದಂಗ ಮಡಿಕೇರಿ ಮೇಲ್ ಮಂಜು
ನಡಿಯೋ ದೊಡ್ಡ ದೊಡ್ಡ ಟೇಬಲ್ ನಂಗೆ , ಪಟ್ನ ಸುತ್ತಿದ ಕಾವಲ್ನಂಗೆ
ಅಲ್ಲಲೇನೆ ಅಂಗಂಗೆನೆ ಗಸ್ತಾಕ್ತಿತ್ತು ಮಂಜು ॥ ೨ ॥

ಸೂರ್ಯನ ಕರೆಗ್ ಬಂದ್ ನಿಂತೋರು , ಕೊಡ್ಗಿನೆಲ್ಲ ಪೂವಮ್ಮ್ನೋರು
ತೆಳ್ಳನೆ ಬೆಳ್ಳನೆ ಬಟ್ಟೆನ್ ಹಾಕಿ ಬಂದಂಗಿತ್ತು ಮಂಜು
ಚಿನ್ತನೆದ್ರಿಗೆ ಬಿಸ್ಲಿನ್ ಕೆಂಪು ,ಮಂಜಿನ್ ಬಣ್ಣ ಕಣ್ಣಗೆ ತಂಪು
ಕೊಡಗಿನ ಲಕ್ಷ್ಮಿ ಪೂವಮ್ಮ್ನೋರ್ಗೆ ಅಲಿನ್ಸೋಲ್ದೆ  ಮಂಜು ॥ ೩ ॥

ಅಗ್ಲೆ ಬರಲಿ , ರಾತ್ರಿ ಬರಲಿ, ಬಿಸಳು ನೆಳ್ಳೂ ಏನೇ ಇರ್ಲಿ
ಕಣ್ಮರೆಯಾಗ ತಾವಕೊಡಲ್ದು ಮಡಿಕೇರಿಗೆ ಮಂಜು
ತೈಲ ನೀರಿನ್ ಮ್ಯಾಗಿದಂಗೆ ಪೂವಮ್ಮನ್ ತಂಗಿದಂಗೆ
ಬಿಟ್ಟು ಬಿಡದಂಗೆ ಹಿಡ್ಕೊಂತಿತ್ತು ಮಡ್ಕೆರಿಗೆ ಮಂಜು।।೩।।


೨೨ . ಕಂಡ ಕಂಡ ಕಡೆ
ರಚೆನೆ : ಜೆ ಎಸ್ . ಶಿವರುದ್ರಪ್ಪ

ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ
ಕಾಡು ಕುದುರೆಗಳ ಹೂಡಿದ ರಥಕ್ಕೆ ದಾರಿಯ ಹಂಗಿಲ್ಲ

ಇಷ್ಟು ದೀಪಗಳು ಸುತ್ತಲು ಉರಿದು ಕಟ್ಟಲು ತಪ್ಪಿಲ್ಲ
ಎಷ್ಟು ಗುಡಿಸಿದರು ದಿನವು ಮನೆಯನು ಪೊರಕೆಗೆ ಬಿಡುವಿಲ್ಲ
ಕರಡು ಪ್ರತಿಗಳನು ಯಾರು ತಿದ್ದಿದರು ಕುರುಡಿಗೆ ಕೊನೆಯಿಲ್ಲ
ಎಷ್ಟು ಉಜ್ಜಿದರು ಕಾಲ ಬುಡಕ್ಕೆ ಗೆದ್ದಲು ಬಿಡಲಿಲ್ಲ ॥  ೧ ॥

ತಿರುಗು ಚಕ್ರಗಳ ನಿಶ್ಚಲ ಕೇಂದ್ರದಿ ನಿಲ್ಲುವ ಬಲವಿಲ್ಲ
ಮೊರೆಯುವ ಅರೆಯುವ ಬದುಕನ್ನೆದುರಿಸಿ ಗೆಲ್ಲುವ  ಛಲವಿಲ್ಲ
ಪಾಚಿಗಟ್ಟಿರುವ ಕುರುಡು ದಾರಿಯಲ್ಲಿ ಜಾರಿಕೆ ತಪಿಲ್ಲ
ದಾರಿ ಉದ್ದಕ್ಕೂ ಸೋಲಿನ ಹಾಡಿಗೆ ಎಂದು ಮುಗಿವಿಲ್ಲ ॥ ೨ ॥

೨೩. ಕಾಣದ ಕಡಲಿಗೆ ಹಂಬಲಿಸಿದೆ ಮನ
ರಚೆನೆ : ಜೆ ಎಸ್ . ಶಿವರುದ್ರಪ್ಪ

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಾಬಲ್ಲೆನೆ  ಒಂದು ದಿನ ಕಡಲನು ಕೂಡಬಲ್ಲೇನೆ ಒಂದು ದಿನ ।। ಪ ।।

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು , ಎನ್ತಿರುವುದು ಅದು ,
ನೋಡಬಲ್ಲನೆ ಒಂದು ದಿನ ,ಕಡಲನು ಕೂದಬಲ್ಲೇನೆ ಒಂದು ದಿನ  ।। ೧।।

ಸಾವಿರ ಹೊಳೆಗಳು ತುಂಬಿ ಹರಿದರು,ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಮ್ಭುಧಿ ತಾನಂತೆ  
ಮುನ್ನೀರಂತೆ , ಅಪಾರವಂತೆ
ಕಾಣ ಬಲ್ಲನೆ ಒಂದು ದಿನ ಅದರಲಿ ಕರಗಲಾರೆನೆ ಒಂದು ದಿನ ।। ೨ ।।

ಜಟಿಲ ಕಾನನದ ಕುಟಿಲ ಪಥಗಳಲಿ  ಹರಿವ  ತೊರೆಯು ನಾನು
ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೆನು 
ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು।।೩ ।।

೨೪.  ಹಿಂದೆ ಹೀಗೆ ಚಿಮ್ಮುತಿತ್ತು  ಕಣ್ಣ  ತುಂಬಾ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ  ।। ಪ ।।

ಜೇನು ಸುರಿಯುತಿತ್ತು ನಿನ್ನ  ಧನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ  ।। ೧।।

ಒಂದು ಸಣ್ಣ ಮಾತಿನಿರಿತ ತಾಳದಯ್ತೆ ಪ್ರೇಮ
ಜೇವವೆರಡು ಕೂಡಿ ಉಂಡ ಸ್ನೇಹವಾಯ್ತೆ ಹೋಮ ।। ೨ ।।

ಹಮ್ಮು  ಬೆಳೆದು ನಮ್ಮ ಬಾಳು  ಆಯತು ಎರಡು ಹೋಳು
ಕೂಡಿಕೊಳಲಿ ಮತ್ತೆ ಪ್ರೀತಿ ತಬ್ಬಿಕೊಳಲಿ ತೋಳು  ।।೩।।

೨೫. ನಿರಾಶೆ ಯಾಕೆ ಗೆಳೆಯ
ರಚನೆ : ಎಂ ಆರ್ ಕಮಲ

ನಿರಾಶೆ ಏಕೆ ಗೆಳೆಯ ,ತೊರೆಯದಿರು ಭರವಸೆಯ ।।ಪ॥

ಹೂವಿನಂತ ಹೃದಯಗಳು  ಕಲ್ಲಾದರೇನು
ಬಂಡೆಗಳ ನಡುವೆಯೂ ಹೂವರಳದೆನು ।।೧ ।।

ಪಡುವಣದ ದಡದಲ್ಲಿ ಮುಳುಗಿದರು ಸೂರ್ಯ
ಮುಂಜಾನೆ ಎಂದಿನಂತೆ ಮೊಳಗುವನು ತೂರ್ಯ ।। ೨।।

ಬೋಳು ಮರ ಹಾಡಿದರು ಹೇಮಂತ ಗಾನ
ಹೊಸ ಚಿಗುರು ಆಸೆಯಲಿ ಕರೆಯದೆ ವಸಂತನ ।।೩।।

೨೬. ಮಬ್ಬು ಕವಿದರೇನು ನಿನ್ನ
ರಚನೆ : ಜಿ . ಎಸ . ಶಿವರುದ್ರಪ್ಪ

ಮಬ್ಬು ಕವಿದರೇನು ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ದೈರ್ಯದಿಂದ , ಅರುಣೋದಯ ತೀರಕೆ ।।ಪ।

ಹಳೆ ನೆನಪುಗಳುದರಲಿ ಬಿಡು ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆ ಉರಿಯಲಿ ಚೈತ್ರೋದಯ ಜ್ವಾಲೆಗೆ ।।೧।।

ಹೊಸ ಭರವಸೆ ಚಿಗುರುತಲಿವೆ ಎಲೆಯುದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ ಪುಟಿಯುತಲಿವೆ ನಂಬಿಕೆ  ।।೨ ।।

ಹಗಲಿರುಳಿನ ಕುದುರೆಗಳನು ಹೂಡಿದ  ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ ಋತು ಚಕ್ರಗಳುರುಳಿವೆ ।।೩।।