ಬುಧವಾರ, ಮೇ 21, 2025

Cookhi crow

Cookhi crow lived with her parents . She was very kind hearted, generous, friendly crow. She had many trustworthy friends who were all praise for her courteous nature .

One fine Sunday morning , she was relaxing sitting infront of her nest . It was a beautiful sunny bright day . All the passing by birds wished her morning and if they had little time , they stopped by and had a small talk with her

While Cookhi was enjoying the beautiful sunshine , suddenly she happened to look down the tree and was shocked to see a small sparrow lying with wounded leg .

Soon Cookhi flew down to check upon the sparrow. It was indeed in a very bad condition . Somebody had hurt her legs , she couldn't fly nor walk. Witty Cookhi in no time picked up sparrow and brought her home and called his mother to look upon the little sparrow.

Cookhis mother checked upon the sparrow and immediately phoned the doctor and gave water to the wounded sparrow .  Doctor eagle rushed to Cookhi's house before eye blink !
He thoroughly checked sparrow and treated wounded leg and told the crow to take good care of the sparrow.  He prescribed all the required medicine and went back to his hospital .

Cookhi crow looked after the sparrow with all its heart . And in a very short time the sparrow recovered .Cookhi and Suppi ( first thing Cookhi asked with sparrow as she recovers) became very good friends. As sparrow was fine now Cookhi's parents thought of sending it back to his parents . But they knew nothing about sparrow s whearabouts .

They spoke to sparrow , if she remembers anything about her parents and the little sparrow gave his father phone number. Soon Cookhis father called , and informed about Suppi to his father .

Suppis parents were overwhelmed by hearing about their daughter. Soon they came to Cookhis house . Seeing her parents Suppi was very . Sparrows thanked crow family for their timely help , without which they would have  missed their little daughter forever .

Suppi went back to her home . Cookhi and Suppi remained good friends throughout life .

ಶುಕ್ರವಾರ, ನವೆಂಬರ್ 25, 2022

Kannada rajyotsava

ಎಲ್ಲರಿಗು ನಮಸ್ಕಾರ . ಶುಭಸಂಜೆ . 

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು? 

ಮಹಾಲಿಂಗರಂಗ ರ ಈ ಸಾಲುಗಳನ್ನು ನೆನೆಯುತ್ತಾ , ಎಲ್ಲರಿಗು ೬೬ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ಇಂದಿನ ಕಾರ್ಯಕ್ರಮವನ್ನು ಪ್ರಾರಂಭಿಸೋಣ 

ಜ್ಞಾನ  ಅಜ್ಞಾನವ  ಕಳೆವಂತೆ , ದೀಪ ಕತ್ತಲೆಯನ್ನು ಕಳೆಯುತ್ತದೆ . ದೀಪವನ್ನು ಬೆಳೆಗಿಸಿ , ಕಾರ್ಯಕ್ರಮವನ್ನು ಶುಭಾರಂಭ ಮಾಡುವುದು ನಮ್ಮ ಸಂಸ್ಕೃತಿ , ಆಚರಣೆ . ಅದರಲ್ಲೂ ಹಚ್ಚ್ಚುವ ಆ ದೀಪ ಕನ್ನಡದ್ದಾದರೆ ಅದರ ಬೆಳಕು, ಮೆರುಗು ಇನ್ನು ಹೆಚ್ಚು . 

ಹಚ್ಚೇವು ಕನ್ನಡದ ದೀಪ , ನಮ್ಮೆಲರ ನೆಚ್ಚಿನ ಕವಿ ಡಿ . ಎಸ್ ಕರ್ಕಿ ಅವರು ಬರಿದಿರುವ ಪದ್ಯ . ಇಂದಿನ ಕನ್ನಡದ ಬಗೆಗಿನ ಕಾರ್ಯಕ್ರಮದಲ್ಲಿ ಇದಕ್ಕೆ ಮಿಗಿಲಾದ ಪ್ರಾಥನೆ ಗೀತೆ ಇರಲಾರದು .

ಈಗ ಈ ಗೀತೆಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸುವವರು ನಮ್ಮವರೇ ಆದ  "ASP ladies group". 


ಈಗ ಸಮಾರಂಭ ಕಳೆ  ಕಟ್ಟಿತ್ತು . ತುಂಬು ಹೃದಯದ ಧನ್ಯವಾದಗಳು .

ನವೆಂಬರ ಕನ್ನಡ ರಜೋತ್ಸವದ ಸಂಭ್ರಮದ ತಿಂಗಳು . ಎಲ್ಲೆಲ್ಲೂ ಕನ್ನಡ ಬಾವುಟ , ಕನ್ನಡ ಗೀತೆಗಳು , ಸಭೆ ಸಮಾರಂಭಗಳು. ಇಂದು ನಾವೆಲ್ಲಾ ಇಲ್ಲಿ ಸೇರಿರುವುದು ಇದೆ ಉದ್ದೇಶಕ್ಕಾಗಿ . ಸಂಭ್ರಮದಾಚಾರಣೆ ಎಂದಾಗ , "ASP" ಕುಟುಂಬ ಯಾರಿಗೂ ಏನು ಕಡಿಮೆ ಇಲ್ಲ . ಎಲ್ಲ ವಿಶೇಷ ದಿನಗಳಂತೆ , ಇಂದು ಕೂಡ ನಮ್ಮ ಚಿಣ್ಣರು , ಕುಟುಂಬದ ಸದಸ್ಯರು ಅನೇಕ  ವಿಭಿನ್ನ ಕಾರ್ಯಕ್ರಮಗಳೊಂದಿಗೆ ತಯಾರಾಗಿದ್ದಾರೆ . ಇನ್ನು ಹೆಚ್ಚು ತಡಮಾಡದೆ ಕಾರ್ಯಕ್ರಮಕ್ಕೆ ಶುರು ಮಾಡೋಣ . 

ಈಗ ನಿಮ್ಮೆಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲು ಬರುತಿದ್ದಾರೆ  ನಮ್ಮ "ASP"  ಸಂಘದ ಅಧ್ಯಕ್ಷರಾದಂತಹ ಶ್ರೀಮತಿ , ಪ್ರತಿಭಾ ರಮೇಶ ರವರು 

ತುಂಬ ಧನ್ಯವಾದಗಳು . 



೧. ಕನ್ನಡ ಹಾಡು ಕೇಳಿದರೆ ನಮ್ಗೆಲ್ಲಾ ಕುಣಿ ಬೇಕು ಅನ್ನಿಸುತ್ತೆ . ಅಂತಹದ್ದೇ ಒಂದು ಅಧ್ಭುತ ಹಾಡು " ಕರುನಾಡೇ ಕೈ ಚಾಚಿದೆ ನೋಡೇ " . ಇಂದು ಈ ಹಾಡಿಗೆ ನೃತ್ಯ ಮಾಡಿ ನಮ್ಮನೆಲ್ಲ ರಂಜಿಸಲು ಬರುತ್ತಿದ್ದಾಳೆ , ಪುಟಾಣಿ । ಖುಷಿ . 

೨. ಸಂಗೀತಕ್ಕೆ  ಯಾವುದೇ  ದೇಶ ,ಭಾಷೆಗಳೆಂಬ ಕಟ್ಟಿಲ್ಲ . ಅದು ಎಲ್ಲವನ್ನು ಮೀರಿದ್ದು . ಸುಮಧುರವಾದ ಹಾಡು ಯಾವ ಭಾಷೆಯಲ್ಲಿ ಇದ್ದರು , ಅದು ನಮ್ಮ ಕಿವಿಗೆ ಹಿತವನ್ನು ಮತ್ತು ಮನಸ್ಸಿಗೆ ಆಹ್ಲಾದತೆಯನ್ನು ಕೊಡುತ್ತದೆ . ಈಗ ಇಂತಹದ್ದೇ ಒಂದು ಸುಂದರ ಗೀತೆಯನ್ನು ನಮ್ಮ ಮುಂದೆ ಹಾಡಲಿರುವ ಪ್ರತಿಭೆ ಪುಟಾಣಿ । ಸಗಸ್ರ . 


 " ನೃತ್ಯ ಆಯಿತು , ಹಾಡು ಆಯಿತು ಮುಂದೆ ಏನು ? . ಹಾಡು ನೃತ್ಯ ಆದ ಮೇಲೆ ಕಥೆ ಬೇಡವೇ ? 

೩. ಕಥೆಯನ್ನು ಕೇಳದ, ಹೇಳದವರು ಬಹುಷಃ ಯಾರು ಇರಲಾರರು . ಅನೇಕ ವಿಷಯಗಳನ್ನು , ಕಣ್ಣಿಗೆ ಕಟ್ಟುವಂತೆ ಮನ ಮುಟ್ಟುವಂತೆ ಹೇಳುವುದೇ ಕಥೆಯ ವಿಶಷತೆ . ಇಂದು ಅಂತಹದ್ದೇ ಒಂದು ಕಥೆಯನ್ನು ನಮ್ಮ ಮುಂದೆ ಹೇಳಲು ಬರುತ್ತಿದೆ , ರಿತ್ವಿಕ್ . ಇವರು "A tale of two frogs" ಕಥೆಯನ್ನು ನಮಗೆ ಹೇಳಲಿದ್ದಾರೆ . ಈಗ ಎಲ್ಲರು ಆಲಿಸೋಣ . 

 " ಕಥೆ ತುಂಬ ಸೊಗಸಾಗಿತ್ತು ರಿತ್ವಿಕ್ . ಧನ್ಯವಾದಗಳು ". 

೪. ಮುಂದಿನ ಪ್ರಸ್ತುತಿ , ಸುಧನ್ವ ಅವರಿಂದ. ಸಂಗೀತವನ್ನು ಹತ್ತಾರು ರೀತಿಯಲ್ಲಿ  ಆಹ್ವಾದಿಸಬಹುದು  . ಅದು ಹಾಡುಗಾರಿಕೆ ಆಗಿರಬಹುದು ಅಥವಾ ವಾದ್ಯ ಸಂಗೀತ. ಇಂದು ಸುಧನ್ವ ಮಕ್ಕಳೆಲ್ಲರಿಗೂ ಅಂತ್ಯಂತ ಪ್ರಿಯವೆಂದ ಎರಡು ಚಲನಚಿತ್ರ " The chronicles of Narnia" ಮತ್ತು "Penguins of madagaskar" ದ  ಹಾಡುಗಳನ್ನು ತನ್ನ  ಕೀಬೋರ್ಡ್ನಲ್ಲಿ ನುಡಿಸಿ ನಮನ್ನು ಮನೋರಂಜಿಸಲಿದ್ದಾರೆ . 


ಈ ವರ್ಷದ ನಾಮ್ಮ "ASP"  ಕುಟುಂಬದ ರಾಜ್ಯೋತ್ಸವ ಆಚರಣೆ ಸ್ವಲ್ಪ ವಿಶೇಷ . ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ "ASP " ಆವರಣದಲ್ಲಿ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .  " ASP" ಸಂಘದ ವತಿಯಿಂದ ನಡೆದ ಈ " ಕ್ರೀಡೋತ್ಸವ" ದಲ್ಲಿ ಭಾಗವಹಿಸಿದ ಎಲ್ಲರಿಗು ಅಭಿನಂದನೆಗಳು .  

ಒಂದು ಕಾರ್ಯಕ್ರಮವನ್ನು ಯೋಚಿಸಿ ಅದನನ್ನು ಕಾರ್ಯಗತ ಮಾಡುವುದು ಸುಲಭದ ಮಾತಲ್ಲ . ಅದರಲ್ಲೂ ಮೂರು ರೀತಿಯ ಪಂದ್ಯಗಳ್ಳನ್ನು , ಮಕ್ಕಳಿಗೆ ಮತ್ತು ವಯಸ್ಕರಿಗೆ  ಪ್ರತ್ಯೇಕವ್ವಾಗಿ  ನಡೆಸಿ  , ಈ ವರ್ಷದ ಕ್ರೀಡೋತ್ಸವವನ್ನು ಅತ್ಯಂತ ಯಶ್ವಿಯಾಗಿ ನಡೆಸಿದ ರೂವಾರಿಗಳು , ಸಂಚಾಲಕರು ಆದ ಶ್ರೀಯುತ । ರವಿ ಕಿರಣ್ ಹಾಗು ಉಮೇಶ ಪಾಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು . 

ಮೊದಲಿಗೆ  ವಯಸ್ಕರಿಗೆ ಗೆ ನಡೆದ ವಿವಿಧ ಕ್ರೀಡಾಕೊಟಗಳ್ಲಲಿ ಗೆದ್ದವರಿಗೆ ಬಹುಮಾನ ವಿತರಣೆ . 


೫. ಈಗ ಮೊಬೈಲ್ ನ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಒಂದು ಸಣ್ಣ ನಾಟಕ ನಮ್ಮ " ASP" ಮಕ್ಕಳಿಂದ  
      


೬. ಅಗಸ್ತ್ಯ ಇಂದ ಕೀಬೋರ್ಡ್'


೭.  ಈಗ ಶ್ರೀನಿವಾಸ ವೀರವಳ್ಳಿ ಅವರಿಂದ ಗಾಯನ. 

೮.  ಮಾತು ಮನುಷ್ಯನಿಗೆ ಎಷ್ಟು ಮುಖ್ಯವೋ ಅದನ್ನು ಸಂಧರ್ಭಕ್ಕೆ ತಕ್ಕ ಹಾಗೆ ಆಡುವುದು ಅಷ್ಟೇ ಮುಖ್ಯ . ಆಡುವ ಮಾತಿನ ವೈಖರಿ , ದಾಟಿ ಸಮಯಕ್ಕೆ ತಕ್ಕ ಹಾಗೆ ಇರಬೇಕು . ಈ ಸಂದೇಶವನ್ನು ಈಗ ನಮ್ಮ ಮುಂದೆ "ಏಕಪಾತ್ರಾಭಿನಯ" ಮೂಲಕ ಪ್ರಸ್ತುತ ಪಡಿಸುವವರು ಸುಧನ್ವ ರ್ . 

ಈಗ "ASP" ಕ್ರೀಡೋತ್ಸವದಲ್ಲಿ ಮಕ್ಕಳಿಗಾಗಿ ನಡೆದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ . 


ಆಟ ಎಂದ ಮೇಲೆ ಸೋಲು , ಗೆಲುವು ಎರಡು ಇದೆ . ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಆಟ ಕೂಡ ಅಷ್ಟೇ ಮುಖ್ಯ . ಮಕ್ಕಳಲ್ಲಿ ಕ್ರೀಡಾಮನೋಭಾವನೆ ಆತ್ಮಸ್ತ್ಯ್ರ್ಯವನ್ನು , ವಿದೇಯತೆನ್ನು , ಛಲವನ್ನು ತುಂಬುತ್ತದೆ . ಇದನ್ನು ಅರಿತು , ಕ್ರೀಡೋತ್ಸವನ್ನು ನಡೆಸಿದ "ASP" ಸಂಘಕ್ಕೆ ನಮ್ಮ ಧನ್ಯವಾದಗಳು . ಈ ಕಾರ್ಯಕ್ರಮಕ್ಕೆ ತಮ್ಮ ಮಕ್ಕಳನ್ನು ಕಳಿಸಿ ಅವರನ್ನು ಹುರಿದುಂಬಿಸಿದ ಪೋಷಕರಿಗೂ ಅನಂತ ನಮನಗಳು . 

ಎಲ್ಲ ರೀತಿಯ ಅದೇ ತಡೆಗಳ್ಳನ್ನು ನೀಗಿಸಿಕೊಂಡು ವಯಸ್ಸಿನ ಮಿತಿ ನೋಡದೆ ಎಲ್ಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತ , ಎಲ್ಲರಿಗು ತಮ್ಮ ಕುಶಲತೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ರವಿಕಿರಣ್ ಮತ್ತು ಉಮೇಶ್ಅವ್ರ್ಗೆ ಮತ್ತೆ ಧನ್ಯವಾದಗಳು . 

೯.  Dr. ರಾಜಕುಮಾರ್ ಕನ್ನಡಿಗರೆಲ್ಲರಿಗೂ ಚಿರಪರಿಚಿತ . ಕನ್ನಡ ಭಾಷೆಗೆ ಅವರ ಕೊಡುಗೆ ಅಪಾರ. ರಾಜ್ಯೋತ್ಸವದಲ್ಲಿ ಅವರು ಕನ್ನಡ ದ ಬಗ್ಗೆ ಹಾಡಿರುವ ಗೀತೆಯನ್ನು ಇಂದು ನಮಗೆ ಹಾಡಿ ಕೇಳಿಸಲಿದ್ದಾರೆ Dr. ಶಮಂಬುಲಿಂಗಯ್ಯ ನವರು . " ಜೇನಿನ ಹೊಳೆಯೋ ಹಾಲಿನ ಮಳೆಯೋ "


೧೦. ಮೂರು ಹಾಡುಗಳು (ಶ್ರುತಿ , ಸ್ವರ್ಣ , ವೃಂದ ಗಾಯನ)

೧೧. ಸಮೂಹ ನೃತ್ಯ . ಪ್ರಸ್ತುತಿ : 

                      ಸಿಂಧು ಚಿಂಚೋಳಿ , ಪ್ರತಿಭಾ ಸುಮಂತ್, ನಾಗಶ್ರೀ, Dr. ದಿವ್ಯ , ಅಶ್ವಿನಿ ಪ್ರಕಾಶ್ .. 


೧೨. ವಂದನಾರ್ಪಣೆ . 

೧೩. ನಾಡಗೀತೆ 
                    



 

ಸೋಮವಾರ, ಅಕ್ಟೋಬರ್ 24, 2022

ಎಲ್ಲೆಲ್ಲೂ ನೀನೆ   !!!


ಮನೆಯ ಕಿಟಕಿ ಬಾಗಿಲು ತೆರೆಯುವಂತಿಲ್ಲ 

ನೀನು ಒಳಸೇರುವೆ ।।

ಕೈ ಕಾಲು ಮುಖ ತೊಳೆಯುವಂತಿಲ್ಲ 

ಮನೆಯೆಲ್ಲಾ ತಿರುಗುವೆ ।।


ನಿನಗೆ ಬೇಕೆಂದ ಕಡೆ ಹೋಗುವೆ 

ಕಂಡದೆಲ್ಲಾ ತಿನ್ನುವೆ ।।

ಎಲ್ಲೆಂದರಲ್ಲಿ ಕೂರುವೆ , ಎಲ್ಲೆಂದರಲ್ಲಿ ಮಲಗುವೆ 

ಕರ್ಕಷವಾಗಿ ಕೂಗುವೆ ।।


ನಿನ್ನ ಆಯಸ್ಸೇ ಕೆಲವು ದಿನ , ಆದರೆ 

ನಿನ್ನ ಆರ್ಭಟ ಮತ್ತದರ ಪರಿಣಾಮಗಳು 

ಹಲವು ದಿನ ।।


ನೀನು ಹೋದರು , ನಾನು ಖುಷಿಪಡುವಂತಿಲ್ಲ 

ಏಕೆಂದರೆ , ಹೋಗುವ ಮುನ್ನ ನೀ ಖಚಿತವಾಗಿ 

ಸೃಷ್ಟಿಸಿರುವೆ ನಿನ್ನಂತಹ  ಹಲವರನ್ನ ।।


ಹೀಗಿರುವಗ್ಗ ನಾ ಏನು ಮಾಡಲಿ 

ಹೇಗೆ ನಿನ್ನಿಂದ ನಾನು ಮುಕ್ತಿ ಹೊಂದಲಿ ।।


ನಿನ್ನ ಕಾಟಕ್ಕೆ ಕೊನೆಯೆಂದೆಣಿಸಿ 

ಸೋತಿಹೆ ನಾನು  ಇಂದು|

ನಿನ್ನಿಂದ ನಮ್ಮನೆಲ್ಲ ಕಾಪಾಡುವ 

ಆಪದ್ಭಾಂಧವ   , ಅನಾಥರಕ್ಷಕ 

ಎಲ್ಲಿರುವನೋ , ಬರುವನೋ ಇನ್ನೆಂದು !!!



(ಈ ವಿಡಂಬ ಕಾವ್ಯದ ಮಾರ್ಮಿಕತೆಯನ್ನು ಅರಿತವರೇ ಕೋವಿದರು)


ಸ್ವರ್ಣ ಕಿರಣ್ 

ಮನೆ ಸಂಖ್ಯೆ ೪೨೧. 



 

ಗುರುವಾರ, ಜೂನ್ 13, 2019

ಜಂಬೋ , ಕೊಶಿ

Ko ಜಂಬೋ , ಕೊಶಿ s
ಒಂದು ದಿನ ಜಂಬೋ ಆನೆ ತನ್ನ ದೊಡ್ಡ  ಹೊಟ್ಟೆಯನ್ನು ತುಂಬಿಸಲು ಮನೆಯಿಂದ ಹೊರಟಿತು . ಪ್ರತಿ ದಿನ ಕಾಡಿನ ಸೊಪ್ಪು ಸದೆ ತಿಂದು ತಿಂದು ಬೇಜಾರಾಗಿದ್ದ ಜಂಬೊ ಇಂದು  , ಹಳ್ಳಿಯ ಕಡೆ ಹೋಗಿ ಆಹಾರ ಹುಡುಕುವ ಯೋಜನೆ ಮಾಡಿದ್ದ . ಅದರಂತೆ ಕಾಡಿನ ದಾರಿ ಸವೆದು ಹಳಿಯ ಬಯಲು ದಾಟಿ , ಒಂದು ಕಬ್ಬಿನ ಗದ್ದೆಯನ್ನು ಕಂಡು , ಕಣ್ಣರಳಿ ಜಂಬೊ ಗದ್ದೆಗೆ ಲಗ್ಗೆ ಹಾಕಿದ

ರಸವತ್ತಾಗಿ ಬೆಳೆದು ನಿಂತಿದ್ದ , ಕಬ್ಬನ್ನು ತನ್ನ ಸೊಂಡಿಲಿನಿಂದ ಮುರಿದು , ಜಗಿದು , ಚೆನ್ನಾಗಿ ಅದರ ರಸ ಸವಿದು ಸಂಭ್ರಮಿಸಿದ .ಮನಸ್ಫೋರ್ತಿಯಾಗಿ ಕಬ್ಬನ್ನು ಪೂರೈಸಿದ ಬಳಿಕ , ಅಲ್ಲೇ ಹತ್ತಿರದಲ್ಲಿದ್ದ ಕೆರೆಯಲ್ಲಿ ತೃಪ್ತಿಯಾಗುವಷ್ಟು ನೀರು ಕುಡಿದ .ತಿಂದು ಕುಡಿದು ಆದ ಮೇಲೆ ಹೊಟ್ಟೆ ಬಾರವಾಗಿ , ಹಾಗೆ ನಿದ್ದೆ ತೇಲಿಸಲು , ಸುತ್ತ  ವಿಶ್ರಾಂತಿಗಾಗಿ ಕಣ್ಣು ಹಾಯಿಸಿದ .ಅಲ್ಲೇ ಸ್ವಲ್ಪ ದೊರರಾದಲ್ಲಿ ಒಂದು ದೊಡ್ಡ ಮರ ಕಾಣಲು, ಅದರ ಬಳಿ ಮೆಲ್ಲನೆ ಹೆಜ್ಜೆ ಹಾಕಿ , ಹೊರಲಾರದ ಹೊಟ್ಟೆಯನ್ನು ಹೊತ್ತು , ಹೇಗೋ ಮರವನ್ನು ತಲುಪಿ , ಮರದ ಕೆಳಗೆ ವಿಶ್ರಾಂತಿಗಾಗಿ  ನಿಂತ . ಸ್ವಲ್ಪ ಸಮಯದ ಬಳಿಕ  "ಸಹಾಯ ಮಾಡಿ,ದಯವಿಟ್ಟು ಯಾರಾದರು ಇದ್ದಾರ ಸಹಾಯ ಮಾಡಿ" ಎಂದು ಒಂದು ಸಣ್ಣ ಧನಿ ಅಂಗಲಾಚುವುದುಕಿವಿಗೆ ಬಿತ್ತು . ತಕ್ಷಣ ನಿದ್ದೆ ಯಿಂದ ಎಚ್ಚೆತ್ತ ಜಂಬೊ , ಮರದ ಸುತ್ತ ಒಂದು ಪ್ರದಕ್ಶಿಣೆ ಬರಲು ಆಗ ಧ್ವನಿ ಮರದ ಕೆಳಗಿನ ಸಣ್ಣ ಪೊಟರೆಯಿಂದ ಬರುವುದು ಅರಿವಾಗಿ , ಯಾರದು ಪೊಟರೆಯ ಹಿಂದೆ ಎಂದು ಕೇಳಿತು. ಆಗ ಪೊಟರೆಯಿಂದ "ನಾನು ಕೊಶಿ, ಮೊಲ . ಕೇಡಿ ತೋಳವೊಂದು, ನನ್ನನ್ನು ನನ್ನ ಮನೆಯಲ್ಲೇ ಕೊಡ್ಡಿ ಹಾಕಿದೆ. ನಾನು ಒಳಗೆ ಇರುವ ಸಮಯ ನೋಡಿ , ಮುಂದಿನ ಬಾಗಿಲಿಗೆ ದೊಡ್ಡ ಕಲ್ಲೊಂದನ್ನು ಎಳೆದು ಹೋಗಿದೆ . ಅದನ್ನು ನನ್ನ ಕೈಯಿಂದ, ತೆಗೆಯುವುದು ಇರಲಿ , ಅಲ್ಲಾಡಿಸುವುದು ಸಾಧ್ಯವಿಲ್ಲ . ಹೇಗಾದರೂ ನನನ್ನು ಉಳಿಸಿ ಎಂದು ಕೊಶಿ ಬೇಡಿಕೊಂಡಿತು. ಬಾರಿ ಗಾತ್ರದ ಜಂಬೊ , ತನ್ನ ಎದುರಿಗಿದ್ದ ದೊಡ್ಡ  ಕಲ್ಲನು !! ಒಂದೇ ಸಾಲಕ್ಕೆ ತನ್ನ ಎಡ ಕಾಲಿನಿಂದ ಒದ್ದು , ಪೊಟರೆಯ ಬಾಗಿಲು ತೆರೆಯಿತು . ತಕ್ಷಣ ಒಳಗಿದ್ದ ಕೊಶಿ ಆಚೆಗೆ ಹಾರಿ , ತನನ್ನು ಕಾಪಾಡಿದ ಜಾಂಬೋವಿಗೆ ಧನ್ಯವಾದ ಹೇಳಿತು. ಅಂದಿನಿಂದ  ಹಳ್ಳಿಗೆ ಬಂದಾಗಲೆಲ್ಲ ಜಂಬೊ ಕೋಶೀಯ ಜೊತೆ ಅಡ್ಡಾಡುತ್ತಿತ್ತು . ಕೊಶಿಗೆ ಕಾಡು ನೋಡುವ ಆಸೆ ಅದಾಗಲೆಲ್ಲ , ಜಂಬೊ ಅದನ್ನು ತನ್ನ ಮೇಲೆ ಕೂರಿಸಿಕೊಂಡು ಕಾಡಿನ ಸವರಿ ಮಾಡಿಸುತಿತ್ತು . ಕೊಶಿ ಮತ್ತು ಜಂಬೊ ಒಳ್ಳೆಯ ಸ್ನೇಹಿತರಾಗಿ , ಬದುಕಿದವು 

ಶುಕ್ರವಾರ, ನವೆಂಬರ್ 3, 2017

NaughtyMonkey

ದೊಡ್ಡ ಕಾಡಿನ ಶಾಲೆಗೆ ಉದ್ದ ಕತ್ತಿನ ಜಿರಾಫೆ ಟೀಚರ್ ! ಆನೆ , ಸಿಂಹ , ಹುಲಿ, ಕರಡಿ, ಮಂಗ , ನರಿ, ತೋಳ ,ಜಿಂಕೆ ಹೀಗೆ ಎಲ್ಲ ಹತ್ತು ಹಲವು ಪ್ರಾಣಿ- ಪಕ್ಷಿಗಳ ಮರಿಗಳು ಒಟ್ಟಿಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿದವು. ಈಗ ಹೇಳುವ ಕಥೆ ಶಾಲೆಯಲ್ಲಿ ಕಲಿಯುತಿದ್ದ ಮಹಾ ಗರ್ವಿ ಮಂಗನದು .  ಇತರ ಪ್ರಾಣಿಗಳನ್ನು ಸದಾ ಕೆದುಕುವುದು , ಉಪದ್ರ ಮಾಡುವುದು ಇದೆ ಅದರ ದಿನ ನಿತ್ಯದ ಕೆಲಸ . ತಾನು ಎಲ್ಲರಿಗಿಂತ ಮಿಗಿಲಿನವನು ಎಂಬ ಭ್ರಮೆ ಅದಕ್ಕೆ. ಮಂಗನ

ಮಳೆಗಾಲದ ದಿನ . ಕಾಡಿನಲ್ಲಿ ಬಿಡದ ಹಾಗೆ ಮಳೆ ಸುರಿಯುತಿತ್ತು .ಜಂಬೊ  ಆನೆ , ಸ್ಟೈಲಿ ಸಿಂಹ , ಬೆಳಗಿನ ತಿಂಡಿ ಮುಗಿಸಿ , ಕೊಡೆ ಹಿಡಿದು ಶಾಲೆಗೇ ತೆರಳುತ್ತಿದ್ದವು .  ಹಾಗೆ ಹಾದಿ ನಡೆಯುತ್ತಿದ್ದಾಗ , ಯಾರೋ ದೂರದಲ್ಲಿ ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿತು. ಆನೆ ಸಿಂಹ ಗಳೆರಡೂ ಪರಸ್ಪರ ಒಬ್ಬರನೊಬ್ಬ ಮುಖ ನೋಡಿಕೊಂಡು , ಯಾರು ಸಹಾಯ ಅಪೇಕ್ಷಿಸುತ್ತಿದರೆ ಎಂದು ನೋಡಬೇಕೆಂದು , ಧ್ವನಿಯನ್ನೇ ಅರಸಿ ಅದು ಬರುತ್ತಿದ್ದ ದಿಕ್ಕಿನ ಕಡೆ ನಡೆದವು .

ಸ್ವಲ್ಪ ದೂರ ಹೋದ ಮೇಲೆ ಎದುರಿಗೆ ಇದ್ದ ಕೆಸರು ಗುಂಡಿಯಲ್ಲಿ ಯಾವದೋ ಮಂಗ ಬಿದ್ದಿರುವುದು ಕಂಡಿತು . ಹತ್ತಿರ ಹೋಗಿ ನೋಡಲು ಅರೆ ! ಇದು ನಮ್ಮ ಸಹಪಾಠಿ ಮೋಟು . ಮೋಟು ಇದೇನಾಯಿತು ನಿನಗೆ ಎಂದು ಜಂಬೊ ಕನಿಕರದಿಂದ ಕೇಳಲು . ಮರದಿಂದ ಮರಕ್ಕೆ ನೆಗೆಯುವ ವೇಳೆ ಆಯಾ ತಪ್ಪಿ ಕೆಸರು ಗುಂಡಿಯಲ್ಲಿ ಬಿದ್ದೆ . ಗುಂಡಿ ತುಂಬಾ ಆಳವಿದ್ದು ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಸತ್ತೇ ಎಂದು ಜೋರಾಗಿ ಅಳಲು ಶುರುಮಾಡಿತು .

ಯಾವಾಗಲೂ ಎಲ್ಲರನ್ನು ಹಂಗಿಸಿ , ರೇಗಿಸುತ್ತಿದ್ದ ಮೋಟು , ಇಂದು , ತನ್ನನ್ನು ಹೇಗೆದಾರು ಕೆಸರಿನಿಂದ ಹೊರಗೆ ತೆಗೆಯುವಂತೆ ಸ್ಟೈಲಿ ಮತ್ತು ಜಂಬೊವನ್ನು ಅಂಗಲಾಚಿತು. ಅದಕ್ಕೆ ಸಹಾಯ ಮಾಡ್ಬೇಕೆಂದು ಮನಸು ಇದ್ದರೂ  , ಹೇಗೆ ಮೋಟುವನ್ನು ಮೇಲೆ ಎಳೆಯುವುದು , ಎಂದು ತಿಳಿಯದು . ಅಷ್ಟು ದೊಡ್ಡ ದೇಹ ಇದ್ದರು , ಜಂಬೊ ಗೆ ಕೆಸರಿನಲ್ಲಿ ಇಳಿಯಲು ಭಯ, ಎಲ್ಲಿ ಕೆಸರಲ್ಲಿ ನಾನು ಹೂತುಹೋಗುವೆನೋ ಎಂದು . ಇನ್ನು ಜಂಬೊ ಧೈರ್ಯ ಮಾಡದೆ ಸಿಂಹ ಕ್ಕೆ ಏನು ಮಾಡಲು ತೋಚದು. ಆನೆ ಸಿಂಹ ಗಳೆರೆಡು ಬೆಪ್ಪಾಗಿ ಮೋಟುವನ್ನು ನೋಡುತ್ತಾ ನಿಂತವು

ಅಷ್ಟರಲ್ಲಿ ತನ್ನ ಪಾಡಿಗೆ ಸಿಳ್ಳೆ ಹೊಡೆಯುತ್ತ , ವಿಕ್ಕಿ ನರಿ ಶಾಲೆಗೇ ಅದೇ ದಾರಿಯಲ್ಲಿ ಸಾಗುತಿತ್ತು . ಆನೆ ,ಸಿಂಹ ಬೆಪ್ಪಾಗಿ ಕೆಸರಿನ ಗುಂಡಿಯ ಬಳಿ ನಿಂತಿರುವುದನ್ನು , ತನ್ನ ಕೊಡೆಯ ಅಂಚಿನಿಂದ ನೋಡಿದ ವಿಕ್ಕಿ, ಏನೋ ತೊಂದರೆ ಆಗಿರಬಹುದೆಂದು ಎಣಿಸಿ , ಅವೆರಡರ ಬಳಿಗೆ ಓಡಿತು . ಅಷ್ಟರಲ್ಲಿ ಮೋಟು ಮಂಗ ನ ಮುಕ್ಕಾಲು ಶರೀರ ಕೆಸರಿನಲ್ಲಿ ಸ್ವಲ್ಪ ಸ್ವಲ್ಪವೇ ಕುಸಿಯುತಿತ್ತು . ಇದನ್ನು ಕಂಡ ನರಿ ತಕ್ಷಣ , ಸುತ್ತ ಕಣ್ಣಾಡಿಸಿತು . ಅಲ್ಲೇ ಹತ್ತಿರದಲ್ಲೇ ಆಲದ ಮರವೊಂದಿತ್ತು . ತನ್ನ ಚಾಣಾಕ್ಷ ಬುದ್ದಿಯನ್ನು, ಚುರುಕುಗೊಳಿಸಿ , ಅದರ ಬೇರೆಗಳನ್ನು ಕತ್ತರಿಸಿ , ಅದರಿಂದ ಹಗ್ಗ ಹೊಸೆದು , ಮೋಟು ವನ್ನು ಹೊರಗೆ ತೆಗೆಯಬಹುದೆಂದು ಯೋಚಿಸಿತು .

ನರಿಯ ಸಮಯೋಚಿತ ಉಪಾಯಕ್ಕೆ ತಲೆದೂಗಿದ , ಸಿಂಹ ತನ್ನ ಚೂಪಾದ ಹಲ್ಲಿನಿಂದ, ಮರದ ಬೇರುಗಳನ್ನು ಕತ್ತರಿಸಿತು. ನರಿ ಅದನ್ನು ಹಗ್ಗದ ಹಾಗೆ ಹೊಸೆದು , ಒಂದು ಕೊನೆಯನ್ನು ಮೋಟುವಿನ ಕಡೆಗೆ ಎಸೆದು, ಇನ್ನೊಂದನ್ನು ಜಂಬೊವಿನ ಕಾಲಿಗೆ ಬಿಗಿಯಿತು. ಜಂಬೊ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮೋಟುವನ್ನು ಎಳೆದು ಕೆಸರಿನಿಂದ ಹೊರಗೆ ಹಾಕಿತು .

ಬದುಕಿದೆಯಾ ಜೀವ ಎಂದು . ಮಂಗಾ ಪಿಳಿ ಪಿಳಿ ಕಣ್ಣು ಬಿಟ್ಟಿತ್ತು. ತನ್ನನ್ನು ಕಾಪಾಡಿದ , ಸಿಂಹ, ಆನೆ ಮತ್ತು ನರಿಗಳಿಗೆ , ಧನ್ಯವಾದ ಹೇಳಿತು .ತಾನೇ ಎಲ್ಲರಿಗಿಂತ ಮಿಗಿಲು ಎಂಬ ಅಹಂಕಾರ ಇಳಿದು, ಮೋಟು ಮಂಗಾ ಕುಗ್ಗಿದ.

ಸೋಮವಾರ, ಅಕ್ಟೋಬರ್ 9, 2017

Pebbe

ಹಿಮಕರಡಿ (ಪೆಬ್ಬೆ)

ಒಂದು ದಿನ ಹಿಮಕರಡಿ ಮರಿಯೊಂದು ತನ್ನ ಮನೆಯ ಮುಂದೆ ಸಪ್ಪೆ ಮುಖ ಮಾಡಿಕೊಂಡು ಕುಳಿತಿತ್ತು . ತನ್ನ ಅಣ್ಣ ಅಕ್ಕಂದಿರು ಎಲ್ಲ ಶಾಲೆಗೆ ತೆರಳಿದ್ದರು.  ಅಮ್ಮ ಮನೆಯಲ್ಲೇ ಇದ್ದರು , ಅಡುಗೆ ಮನೆಯಲ್ಲಿ ಅವಳಿಗೆ ಉಸಿರಾಡಲು ಪುರುಸೊತ್ತು ಇಲ್ಲದಷ್ಟು ಕೆಲಸ. ಆಟವಾಡಲು ಯಾರಾದರೂ ಸಿಗಬಹುದೇ ಎಂದು ದಾರಿ ನೋಡುತ್ತಾ ಕುಳಿತಿದ್ದ ಪೆಬ್ಬೆ. ಅಷ್ಟರಲ್ಲಿ ಅವನ ಅಮ್ಮ ಕರೆದದ್ದು ಕೇಳಿ , ಆಟವಾಡಲು ಕರೆಯುತ್ತಿದಾಳೆ ಎಂದು ಖುಷಿಯಲ್ಲಿ ಒಳಗೆ ಓಡಿತು .

ಸಂಜೆ ತಿಂಡಿ ಗೆ ಪಾಯಸ ಮಾಡುವಾದಾಗಿ ಯೋಚಿಸ್ಸಿದ್ದ ತಾಯಿ , ಮನೆಯಲ್ಲಿ ಸಕ್ಕರೆ ಖಾಲಿ ಯಾಗಿರಿವುದನ್ನು ನೋಡಿ , ಅದನ್ನು ತರಲು ಪೆಬ್ಬೆಯನ್ನು ಕರೆದಿದ್ದಳು . "ಪೆಬ್ಬೆ ಅಂಗಡಿ ಗೆ ಹೋಗಿ ಕೆಜಿ ಸಕ್ಕರೆ ತಾ, ನಿನ್ನ ಅಣ್ಣ ಅಕ್ಕ ಶಾಲೆ ಇಂದ ಬರುವು ವೇಳೆಗೆ ಪಾಯಸ ಮಾಡುವೆ , ಎಲ್ಲರು ತಿನ್ನುವ" ಎಂದು ಅದರ ಕೈಗೆ ಚೀಲ ಮತ್ತು ಹಣವನ್ನು ನೀಡಿದಳು . ಆಟವಾಡಲು ಕರೆಯುತ್ತಿದಾಳೆ ಎಂದು ನೆನೆಸಿದ ಪೆಬ್ಬೆಗೆ ತುಸು ನಿರಾಸೆ ಯಾದರು , ಅಂಗಡಿಗೆ ಹೋಗುವ ಕೆಲಸ ಮನೆಯ ಮುಂದೆ ದಾರಿ ಕಾಯುವುದಕ್ಕಿಂತ ಲೇಸು ಎನ್ನಿಸಿ , ಚೀಲ ಹಿಡಿದು ಅಂಗಡಿಯ ಕಡೆ ಹೊರಟಿತು .

ಹಿಮದಿಂದ ಆವರಿಸಿದ ಬೆಟ್ಟ ಗುಡ್ಡಗಳ ಹತ್ತಿ ಇಳಿಯುತ್ತ  ಸಾಗಿದ್ದ ಪೆಬ್ಬೆ ಇದ್ದಕ್ಕಿದ್ದ ಹಾಗೆ ಏನೆನ್ನೋ ನೆನಸಿಕೊಂಡು ಹಾಗೆ  ಹಿಂದೆ ತಿರುಗಿ ಅಲ್ಲೇ ಇದ್ದ ಹಿಮ ಸರೋವರವನ್ನು ನೋಡಿ ,ಅದರಲ್ಲಿ ಇರುವು ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ತಿನ್ನುವ , ನೀರಲ್ಲಿ ಆಟವಾಡುವ ಆಸೆಯಿಂದ ಕಿರುನಗೆ ಬೀರುತ್ತಾ ಅದರ ಕಡೆಗೆ ಹೆಜ್ಜೆ ಹಾಕಿತು . ಇನ್ನು ಸಣ್ಣವನಾಗಿದ್ದ ಪೆಬ್ಬೆಗೆ ಗೆ ಮೀನು ಹಿಡಿಯುವುದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ . ಅಲ್ಲದೆ ಸರೋವರದಲ್ಲಿ ಇರಬಹುದಾದ ದೊಡ್ಡ ಮೀನುಗಳಿಂದ ಪೆಬ್ಬೆ ಗೆ ಅಪಾಯವಾಗಬಹುದು ಎಂದು ಅದರ ಅಪ್ಪ ಅಮ್ಮ ಅದಕ್ಕೆ ಸರೋವರದಲ್ಲಿ ಮೀನು ಹಿಡಿಯಲು ಬಿಟ್ಟಿರಲಿಲ್ಲ. ಆದರೆ ಈಗ ಯಾರು ತಡೆಯವರು ಇಲ್ಲದ ಕಾರಣ , ಪೆಬ್ಬೆ ಸರೋವರದ ಕಡೆಗೆ ಹೋಗುವು ಮೀನು ಹಿಡಿಯುವ ಧೈರ್ಯ ಮಾಡಿದ್ದ

ತನ್ನ ಮನಸಿಗೆ ತೃಪ್ತಿ ಆಗುವಷ್ಟು ಸಮಯ ಪೆಬ್ಬೆ ನೀರಿನಲ್ಲಿ ಆಟವಾಡಿತು . ಕೊರೆಯುವ ಹಿಮ ಸರೋವರದಲ್ಲಿ ಮಿಂದೆದ್ದು ಖುಷಿ ಪಟ್ಟಿತ್ತು  . ನೀರಿನ ಆಳದಲ್ಲಿ ಈಜಿ ಕಂಡ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಗುಳುಂ ಎನಿಸಿತು . ತನ್ನ ಸಾಮರ್ಥ್ಯಕ್ಕೆ ತಾನೇ ಗರ್ವ ಪಡುತಾ, ಅಪ್ಪ ಅಮ್ಮ ಗೆ ಬುದ್ದಿ ಇಲ್ಲ , ನಾನು ಒಳ್ಳೆಯ ಬೇಟೆಗಾರ, ಈಜುಗಾರ, ಇಂದು ಮನೆಗೆ ಹೋದ ಮೇಲೆ ಎಲ್ಲರಿಗು ತನ್ನ ಆಟಗಳ ವರ್ಣನೆ ಮಾಡುವೆ ಎಂದು ಯೋಚಿಸಿಕೊಂಡು ನೀರಿನಲ್ಲಿ ಮುಳುಗೇಳುತ್ತಿತ್ತು . ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಪೆಬ್ಬೆ , ದೊಡ್ಡ ಮೀನೊಂದು ತನ್ನ ಬಳಿ ಬರುವುದು ಕಾಣಲೇ ಇಲ್ಲ . ಇನ್ನೇನು ಆ ದೊಡ್ಡ ಮೀನು ಇದರ ಕಾಲಿಗೆ ಬಾಯಿ ಹಾಕುವಷ್ಟರಲ್ಲಿ , ಪೆಬ್ಬೆ ಎಚ್ಚೆತ್ತು ಮೇಲಕ್ಕೆ ಈಜಿತು . ಆದರೆ ಬಿಡದ ದೊಡ್ಡ ಮೀನು ಇದನ್ನು ಹಿಂಬಾಲಿಸಿ ತಿನಲ್ಲೂ ಯತ್ನಿಸ್ತು. ಆದ್ರೆ ಪೆಬ್ಬೆ ಅದೃಷ್ಟವಶಾತ್ ಹೇಗೋ ತಪ್ಪಿಸಿಕೊಂಡು ಜೀವಕ್ಕೆ ಜೀವ ಬಿಡುತ್ತ ಸರೋವರದಿಂದ ಮೇಲೆ ಓಡಿತು .

ಅಪ್ಪ ಅಮ್ಮ ನ ಮಾತನ್ನು ಕೇಳದೆ ವ್ಯರ್ಥ ಸಾಹಸಕ್ಕೆ ಹೊರಟಿದ್ದು ದೊಡ್ಡ ತಪ್ಪೆಂದು ಅರಿವಾಗಿ , ಇದು ಯಾವುದನ್ನು ಮನೆಯಲ್ಲಿ ಯಾರಿಗೂ ಹೇಳ್ಬಾರದು ಎಂದು ನಿರ್ಧರಿಸಿ ಅದೇ ಭಯದಲ್ಲಿ ಹೇಗೋ ಅಂಗಡಿಗೆ ತೆರಳಿ , ಸಕ್ಕರೆ ಖರೀದಿಸಿ , ಮನೆಗೆ ಸಾಗಿ ಅಮ್ಮನಿಗೆ ನೀಡಿತು . ಸಂಜೆ ಪಾಯಸ ತಿಂದು ಇನ್ನೇನು ಮಲುಗುವ ಸಮಯದಲ್ಲಿ , ಬೆಳ್ಳಿಗೆ ನಡೆದ ಎಲ್ಲ ಸಂಗತಿಗಳನ್ನು ಪೆಬ್ಬೆ ಅಮ್ಮನಲ್ಲಿ ಹೇಳಿತು , ಬೈಯ್ಯಬಹುದೆಂದು ನೆನಿಸಿದ್ದ ಪೆಬ್ಬೆಯ ಸಾಹಸಕ್ಕೆ ಖುಷಿ ಪಟ್ಟ ಅಮ್ಮ ಅದನ್ನು ತೋರ್ಪಡಿಸದೆ , ಮುಂದಿನ ಬಾರಿ ಒಬ್ಬನೇ ಸರೋವರದಲ್ಲಿ ಇಳಿಯಬಾರದೆಂದು ಆಣೆ ಮಾಡಿಸಿಕೊಂಡಳು .ಆಣೆ ಮಾಡಿದ ಪೆಬ್ಬೆ ಅಮ್ಮನ ಬಳಿ ಬೆಚ್ಚಗೆ ಮಲಗಿದ. 

ಗುರುವಾರ, ಜೂನ್ 15, 2017

Panchabootha

 ಪಂಚಭೂತಗಳು ಪ್ರಕೃತಿಯ ಮೂಲ ಧಾತುಗಳು .ಬ್ರಹ್ಮಾಂಡದ ಚರಾಚರಗಳು  ಪಂಚಭೂತಗಳಿಂದ ಆದದ್ದು .ಭೂಮಿ ಅಥವ ಪೃಥ್ವಿ ,ಜಲ ಅಥವ ನೀರು, ತೇಜಸ್ ಅಥವ ಬೆಂಕಿ,ಪವನ ಅಥವ ಗಾಳಿ, ಶೂನ್ಯ ಅಥವ ಆಕಾಶ  ಇವೆ ಆ ಐದು ಪಂಚ ಮಹಾಭೂತಗಳು . ಪಂಚಮಹಭೂತಗಳ ಸಿದ್ದಾಂತ  ಕೇವಲ ಭಾರತದಲ್ಲ  ಪುರಾತನ ಗ್ರೀಕ್, ಈಜಿಪ್ಟ್   ಮತ್ತಿತರ ರಾಷ್ಟ್ರಗಳ ತತ್ವಜ್ಞಾನಿಗಳು ಕೂಡ  ಇದರ ಬಗ್ಗೆ  ಪ್ರತಿಪಾದಿಸಿದ್ದಾರೆ .

ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು  ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು  ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ  ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ  ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ  ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ  ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು .  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು

ಪುರಾಣಗಳು , ಉಪನಿಷತ್ತುಗಳ ಜೊತೆ , ಆಯುರ್ವೇದ ಕೂಡ ಪಂಚ ಭೂತಗಳ ಮಹತ್ವವನ್ನು ಹೇಳುತ್ತದೆ .ಇದರ ಪ್ರಕಾರ , ಮನುಷ್ಯನಮರಣಾನಂತರ ಅವನ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯ ಸಮತೋಲನದ ಗುಟ್ಟು . ಆಯುರ್ವೇದದ ಪ್ರಕಾರ  ಮನುಷ್ಯನ ಆರೋಗ್ಯ ಕೂಡ ಪಂಚಭೂತಗಳಿಂದ ನಿಯಂತ್ರಿಸಲ್ಪಡುತ್ತದೆ . ದೇಹದ ಯಾವುದೇ ರೀತಿಯ ಅಸ್ವಸ್ಥೆ ಗೆ , ಪಂಚಭೂತಗಳ ಅಸಮತೊಲನವೆ ಕಾರಣ. ಆಯುರ್ವೇದದಲ್ಲಿ ಹೇಳುವ ವಾತ ಪಿತ್ತ , ಕಫ ದೋಷಗಳು , ಪಂಚಭೂತಗಳ ಪ್ರಾತಿನಿದ್ಯ .ಇನ್ನು ಪ್ರಾಚಿನ ಹಸ್ತ  ಮುದ್ರ ಕೂಡ ಪಂಚಭೂತಗಳ ಸಿದ್ಧಾಂತದಿಂದ ಆದ  ಜ್ಞಾನ . ಹಸ್ತ ಮುದ್ರಿಕೆಯ ಪ್ರಕಾರ ಹೆಬ್ಬೆರಳು ಅಗ್ನಿಯನ್ನು , ತೋರುಬೆರಳು ವಾಯುವನ್ನು, ಮದ್ಯಬೆರಳು ಆಕಾಶವನ್ನು ,ಉಂಗುರ ಬೆರಳು ಪ್ರುಥ್ವಿಯನ್ನು ಮತ್ತು ಕಿರು ಬೆರಳು ನೀರನ್ನು ಪ್ರತಿನಿದುಸುತ್ತದೆ

ದಕ್ಷಿಣ ಭಾರತದಲ್ಲಿ , ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ  ೫ ಬೇರೆ ಬೇರೆ ದೇವಸ್ಥಾನಗಳಿವೆ . ಈ ೫ ದೇವಸ್ಥಾನಗಳು ಪಂಚಬೂತಗಳನ್ನು  ಪ್ರಥಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೆಶ್ವರ ದೇವಸ್ಥಾನ , ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ .

ನಮ್ಮ ದೇಹದಂತೆ ಮನ್ಸಸ್ಸು ಕೂಡ ಪಂಚಭೂತಗಳ ಅತಿ ಸೂಕ್ಧ್ಮ ರೂಪದಿಂದ  ಆದದ್ದು . ಹಾಗಾಗಿ ಯಾವ ಪಂಚಭೂತ ಪ್ರಧಾನವಾಗಿರತ್ತೊದೋ ,ಮನುಷ್ಯನು ಅದೇ ರೀತಿಯ ವಿವಿದ ಮನಸ್ಥಿತಿ ಮತ್ತು ಭಾವಪರವಶತೆ ಯನ್ನು ಅನುಭವಿಸುತ್ತಾನೆ . ಉಧಾಹರಣೆಗೆ ಹೇಳುವುದಾದರೆ , ಪ್ರುಥ್ವಿಯು  ಪ್ರಬಲವಾದಾಗ ಆರಾಮದ ಅಥವ ಅಸ್ವಸ್ಥೆಯ , ಮತ್ತು ಮನಸೀನ ಭಾರವಾದ ಸ್ತಿತಿ, ಅದೇ ರೀತಿ ವಿಹರಿಸುತ್ತಿರುವ, ತೇಲುತಿರುವ ಮನಸಲ್ಲಿ  ನೀರಿನ  ,ಮುಂದೆ ನಡೆಯುವ ಅಥವ  ಸನ್ನಿವೇಶಗಳಿಂದ ಓಡಿ ಹೋಗಬೇಕು ಎಂದೆನಿಸುವ ಸಮಯಗಳ್ಳಲ್ಲಿ ಗಾಳಿಯಾ  , ಸಾಧಿಸುವ ಛಲ ,ರೋಷ , ಬೆಂಕಿಯ , ಮತ್ತು ಪೂರ್ಣತೆಯ ,ಹಗುರತೆಯ  ನಮ್ಮನ್ನು  ಸುತ್ತುವರೆದಾಗ ಮನಸ್ಸು ಆಕಾಶದ ಅಧೀನದಲ್ಲಿರುತ್ತದೆ . ಪಂಚಬೂತಗಳು   ನೇರವಾಗಿ ನಮ್ಮ ಮನಸನ್ನು ನಿಯಂತ್ರಿಸುತ್ತವೆ ಹಾಗಾಗಿ ಜ್ಞಾನಿಗಳು , ಋಷಿಮುನಿಗಳು ಮೂಲವಸ್ತುಗಳ ನಿಗ್ರಹಕ್ಕೆ , ಹತೋಟಿಗೆ ಯೋಗ ಧ್ಯಾನ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು . ಯೋಗದ ಅಂತಿಮ,ಕಟ್ಟ ಕಡೆಯ ಉದ್ದೇಶ ಬೂತಶುದ್ದಿ - ಅಂದರೆ ಪಂಚಭೂತಗಳನ್ನು ಚೊಕ್ಕಟಗೊಲಿಸುವ  ಕೆಲಸ .ಹಾಗಾಗಿ ಶಾಂತಿ , ಸಮ್ರುದ್ದಿ ಮತ್ತು ಚಿರಂತನವಾದ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಪಂಚಬೂತಗಳ ಪ್ರಾಮುಖ್ಯತೆ ಹಾಗು ಅದರ ಮಾರ್ಮಿಕ ಫಲ ಪರಿಣಾಮಗಳ ಬಗೆಗಿನ ತಿಳುವಿಕೆ ತುಂಬ ಮುಖ್ಯ .